alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷದ ಅಂಡಾಣುವಿನಿಂದ ಮಗುವಿಗೆ ಜನ್ಮ !

egg-freezing-oped-horizontal-large-gallery

ಬೀಜಿಂಗ್: ಚೀನಾದಲ್ಲಿ ಸುಮಾರು ಹಲವು ದಶಕಗಳ ಕಾಲ ಒಂದೇ ಮಗು ನೀತಿ ಜಾರಿಯಲ್ಲಿತ್ತು. ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದ ಕಾರಣ ಒಂದೇ ಮಗು ನಿಯಮ ಜಾರಿಗೆ ತರಲಾಗಿತ್ತು. ಕಳೆದ ವರ್ಷ ಈ ನಿಯಮ ಸಡಿಲಿಸಲಾಗಿದೆ.

ಒಂದೇ ಮಗು ನಿಯಮ ಕೈಬಿಟ್ಟಿದ್ದು, ವಿಶೇಷ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅದೇನೆಂದರೆ ಸುಮಾರು 12 ವರ್ಷಗಳ ಕಾಲ ಸಂರಕ್ಷಿಸಿ ಇಟ್ಟಿದ್ದ ಫಲಿತ ಅಂಡಾಣುವಿನಿಂದ ಆರೋಗ್ಯವಂತ ಮಗು ಜನಿಸಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಚೀನಾದಲ್ಲಿಯೇ ಅತಿಹೆಚ್ಚು ದಿನಗಳಿಂದ ಸಂರಕ್ಷಣೆ ಮಾಡಿದ ಪ್ರಣಾಳ ಶಿಶು ಇದಾಗಿದೆ. 40 ವರ್ಷ ವಯಸ್ಸಿನ ಲೀ ಎಂಬ ಮಹಿಳೆ 12 ವರ್ಷಗಳಿಂದ ಸಂರಕ್ಷಿಸಿ ಇಟ್ಟಿದ್ದ ಫಲಿತ ಅಂಡಾಣುವಿನಿಂದ ತನ್ನ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.

ಬಂಜೆತನ ನಿವಾರಣೆಗೆ ಲೀ 2003ರಿಂದ ಚಿಕಿತ್ಸೆ ಪಡೆಯುತ್ತಿದ್ದು, ಆ ಸಂದರ್ಭದಲ್ಲಿ ಫಲಿತ ಅಂಡಾಣುಗಳನ್ನು ಸಂರಕ್ಷಿಸಿ ಇಡಲಾಗಿತ್ತು. 2004ರಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು. ಚೀನಾದಲ್ಲಿ ಒಂದೇ ಮಗು ನೀತಿ ಸಡಿಲಿಕೆಯಾಗಿದ್ದರಿಂದ ಎರಡನೇ ಮಗು ಪಡೆಯಲು ಬಯಸಿದ್ದರು. ಸಂರಕ್ಷಣೆ ಮಾಡಿ ಇಡಲಾಗಿದ್ದ ಅಂಡಾಣುವಿನಿಂದ ಅವರೀಗ ಎರಡನೇ ಮಗು ಪಡೆದಿದ್ದಾರೆ. ಇತ್ತೀಚೆಗಷ್ಟೇ ಮಾಜಿ ವಿಶ್ವಸುಂದರಿಯೊಬ್ಬರು ಸುಮಾರು 8 ವರ್ಷಗಳಿಂದ ಸಂರಕ್ಷಿಸಿ ಇಟ್ಟಿದ್ದ ಅಂಡಾಣು ಬಳಸಿಕೊಂಡು ಮಗುವಿಗೆ ಜನ್ಮ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...