alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳನ್ನು ನಿರ್ಲಕ್ಷಿಸಿದ್ರೆ ಮೂರು ವರ್ಷ ಜೈಲು

arab-1

ಮಕ್ಕಳ ಪಾಲನೆ, ಪೋಷಣೆ ಪಾಲಕರ ಹೊಣೆ. ಸ್ವಲ್ಪ ನಿರ್ಲಕ್ಷ ಮಾಡಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದು ಆಧುನಿಕ ಯುಗ. ಇಲ್ಲಿ ಮನೆ ಮೇಲೆ ಮನೆ. 10,15 ನೇ ಅಂತಸ್ತಿನಲ್ಲಿ ವಾಸಿಸುವವರಿದ್ದಾರೆ. ಇಂತ ವೇಳೆ ಮಕ್ಕಳ ಬಗ್ಗೆ ಗಮನಹರಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ ಮಕ್ಕಳ ರಕ್ಷಣೆಗೆ ಮುಂದಾಗಿರುವ ದುಬೈ ಪಾಲಕರಿಗೊಂದು ಕಠಿಣ ಕಾನೂನು ಜಾರಿಗೆ ತಂದಿದೆ. ‘

ದುಬೈನಲ್ಲಿ ಮಕ್ಕಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದ ಅಥವಾ ಅವರನ್ನು ನಿರ್ಲಕ್ಷಿಸುವ ಪಾಲಕರು ದಂಡ ನೀಡುವ ಜೊತೆಗೆ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಗಲ್ಫ್ ನ್ಯೂಸ್ ಪ್ರಕಾರ, ಬಾಲ್ಕನಿಯಿಂದ ಬೀಳುವ ಮಕ್ಕಳ ಸಂಖ್ಯೆ ಹೆಚ್ಚಾಗ್ತಾ ಇದೆ. ಇದಕ್ಕೆ ಪಾಲಕರ ನಿರ್ಲಕ್ಷವೇ ಮುಖ್ಯ ಕಾರಣ. ಹಾಗಾಗಿ ಇದನ್ನು ತಡೆಯಲು ಈ ನಿರ್ಧಾರಕ್ಕೆ ಬರಲಾಗಿದೆ.

ಕಳೆದ ವರ್ಷ ಮಗುವೊಂದು ಬಾಲ್ಕನಿಯಿಂದ ಬಿದ್ದಿತ್ತು. ಇದಕ್ಕೆ ತಾಯಿಯ ನಿರ್ಲಕ್ಷವೇ ಕಾರಣ ಎನ್ನುವುದು ಸ್ಪಷ್ಟವಾಗಿತ್ತು. ಹಾಗಾಗಿ ಕೋರ್ಟ್ 3500 ದಿರಾಮ್ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...