alex Certify
ಕನ್ನಡ ದುನಿಯಾ       Mobile App
       

Kannada Duniya

OMG: ಈ ಮಗುವಿಗಿದೆ 31 ಬೆರಳು

fingers1

ಮನುಷ್ಯನ ಕೈ ಹಾಗೂ ಕಾಲಿನಲ್ಲಿ 5 -5 ಬೆರಳುಗಳಿರುತ್ತವೆ. ಕೆಲವೊಬ್ಬರಿಗೆ ಒಂದು ಕೈ ಅಥವಾ ಕಾಲಿಗೆ ಆರು ಬೆರಳುಗಳಿಸುವುದನ್ನು ನಾವು ನೋಡಿದ್ದೇವೆ. ಆದ್ರೆ ಕೈ, ಕಾಲು ಸೇರಿ 31 ಬೆರಳುಗಳಿರುವ ಬಗ್ಗೆ ನೀವು ಕೇಳಿದ್ದೀರಾ? ಚೀನಾದಲ್ಲಿ ನಾಲ್ಕು ತಿಂಗಳ ಮಗುವಿಗೆ 31 ಕೈ ಬೆರಳುಗಳಿವೆ. ಈ ಬಾಲಕನ ಹೆಸರು ಹಾಂಗ್ ಕಾಂಗ್. ಜನವರಿಯಲ್ಲಿ ಈ ಮಗು ಜನಿಸಿದೆ.

ಆತನ ಕೈನಲ್ಲಿ 15 ಬೆರಳುಗಳು ಹಾಗೂ ಕಾಲಿನಲ್ಲಿ 16 ಬೆರಳುಗಳಿವೆ. ಎರಡು ಅಂಗೈ ಕೂಡ ಇದ್ದು, ಅದಕ್ಕೆ ಯಾವುದೇ ಬೆರಳುಗಳಿಲ್ಲ. ವೈದ್ಯರ ಪ್ರಕಾರ ಇದನ್ನು polidaktili ಎಂದು ಕರೆಯುತ್ತಾರೆ. ಇದರಿಂದ ಬಳಲುವವರು ಹೆಚ್ಚುವರಿ ಬೆರಳುಗಳನ್ನು ಹೊಂದಿರುತ್ತಾರೆ. ಸಾವಿರ ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮೂಲಕ ಹೆಚ್ಚುವರಿ ಬೆರಳುಗಳನ್ನು ಕಟ್ ಮಾಡಲಾಗುತ್ತದೆ. ಹಾಂಗ್ ಕಾಂಗ್, ತಾಯಿಗೆ ಕೂಡ ಆರು ಬೆರಳುಗಳಿವೆ. ಶಸ್ತ್ರಚಿಕಿತ್ಸೆಗೆ 200,000 ಯುವಾನ್ ಅವಶ್ಯಕತೆಯಿದೆಯಂತೆ. ಹಾಗಾಗಿ ಆತನ ಪಾಲಕರು ನೆಟ್ ನಲ್ಲಿ ಸಹಾಯ ಕೇಳಿದ್ದರು. ಈಗ 40,000 ಯುವಾನ್ ನೆರವು ದೊರೆತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...