alex Certify
ಕನ್ನಡ ದುನಿಯಾ       Mobile App
       

Kannada Duniya

28 ವರ್ಷಗಳ ನಂತರ ಆ ಊರಿನಲ್ಲಿ ಕೇಳ್ತು ಮಗುವಿನ ಅಳು..!

city

ಮನೆಗೆ ಹೊಸ ಅತಿಥಿಯ ಆಗಮನವಾದ್ರೆ ಸಂತೋಷವಾಗೋದು ಸಹಜ. ಮನೆ ಮಂದಿ, ಸಂಬಂಧಿಕರೆಲ್ಲ ನವಜಾತ ಶಿಶುವನ್ನು ಖುಷಿ ಖುಷಿಯಾಗಿ ಸ್ವಾಗತಿಸ್ತಾರೆ. ಇನ್ನು ಸೆಲೆಬ್ರಿಟಿಗಳಿಗೆ ಮಕ್ಕಳಾದ್ರೆ ಅವರ ಅಭಿಮಾನಿಗಳು ಸಂಭ್ರಮಿಸೋದು ಸಹಜ. ಆದ್ರೆ ಇಟಲಿಯಲ್ಲಿ ಪಟ್ಟಣಕ್ಕೆ ಪಟ್ಟಣವೇ ಮಗು ಹುಟ್ಟಿದ್ದಕ್ಕೆ ಹಬ್ಬ ಆಚರಿಸ್ತಾ ಇದೆ.

ಹೌದು, ಜಗತ್ತಿನಲ್ಲಿ ಪ್ರತಿದಿನ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಇಟಲಿಯಲ್ಲಿ ಆಘಾತ, ಆಶ್ಚರ್ಯಪಡುವಂತಹ ಘಟನೆಯೊಂದು ನಡೆದಿದೆ. ಇಟಲಿಯ ಸಣ್ಣ ಪಟ್ಟಣ ಒಸ್ಟಾನಾದಲ್ಲಿ 28 ವರ್ಷಗಳ ನಂತರ ಮೊದಲ ಬಾರಿ ಮಗುವಿನ ಅಳು ಕೇಳಿಸಿದೆ.

ಮೂಲತಃ ಒಸ್ಟಾನಾ ಒಂದು ಸಣ್ಣ ಪಟ್ಟಣ. ಮರುಭೂಮಿ. ಅಲ್ಲಿನ ಜನಸಂಖ್ಯೆ ಅತಿ ಕಡಿಮೆ. ಈವರೆಗೆ ಅಲ್ಲಿ 84 ಮಂದಿ ವಾಸಿಸ್ತಾ ಇದ್ದರು. ಈಗ  ಜನಸಂಖ್ಯೆ 85ಕ್ಕೇರಿದೆ. ಇದಕ್ಕೆ ಕಾರಣ ಪಾಬ್ಲೊ ಜನನ. ಪಾಬ್ಲೊ ಕಳೆದ ವಾರ ಟುರಿನ್ ಆಸ್ಪತ್ರೆಯಲ್ಲಿ ಜನಿಸಿದೆ.

ಮಗು ಹುಟ್ಟಿದ ಖುಷಿಯನ್ನು ಇಡೀ ಪಟ್ಟಣದ ಜನ ಹಬ್ಬದಂತೆ ಆಚರಿಸಿದ್ದಾರೆ. 1987ರ ನಂತರ ಅಲ್ಲಿ ಮಕ್ಕಳು ಜನಿಸಿರಲಿಲ್ಲ. ಹಾಗಾಗಿ ಅಲ್ಲಿನ ಜನ ಖುಷಿಯಾಗಿದ್ದಾರೆ. ಅಲ್ಲಿನ ಮೇಯರ್ ಲೊಂಬಾರ್ಡೊ ಹೇಳುವ ಪ್ರಕಾರ 19ನೇ ಶತಮಾನದಲ್ಲಿ ಇಲ್ಲಿ ಒಂದು ಸಾವಿರ ಮಂದಿ ವಾಸಿಸುತ್ತಿದ್ದರಂತೆ. ಎರಡನೇ ಮಹಾ ಯುದ್ಧದ ನಂತರ ಜನಸಂಖ್ಯೆ ಕಡಿಮೆಯಾಗುತ್ತ ಬಂತಂತೆ. 1975ರಲ್ಲಿ ಜನಸಂಖ್ಯೆ ಪ್ರಮಾಣ ಮತ್ತಷ್ಟು ಇಳಿಮುಖವಾಯ್ತಂತೆ. 1976-1987ರ ಒಳಗೆ ಕೇವಲ 17 ಮಕ್ಕಳು ಜನಿಸಿದ್ದವಂತೆ. ನಂತರ ಈಗ ಒಂದು ಮಗು ಹುಟ್ಟಿದೆ ಎನ್ನುತ್ತಾರೆ ಲೊಂಬಾರ್ಡೊ.

ಜನಸಂಖ್ಯೆ ಹೆಚ್ಚಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಾಗೇ  ಈ ಪಟ್ಟಣದ ಸಂಸ್ಕೃತಿ ಉಳಿಸಿಕೊಳ್ಳುವುದಕ್ಕಾಗಿ ಹೆಬ್ಬಾಗಿಲಿನಲ್ಲಿ ಕೊಕ್ಕರೆ ಮಂಟಪ ನಿರ್ಮಾಣ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...