alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಲೈವ್ ನಲ್ಲೇ ನಡೀತು ಅಮಾನುಷ ಕೃತ್ಯ

hate-crime

ಫೇಸ್ ಬುಕ್ ಲೈವ್ ನಲ್ಲೇ ವ್ಯಕ್ತಿಯೊಬ್ಬನನ್ನು ಥಳಿಸಿದ ನಾಲ್ವರನ್ನು ಅಮೆರಿಕದ ಚಿಕಾಗೋ ಪೊಲೀಸರು ಬಂಧಿಸಿದ್ದಾರೆ. 30 ನಿಮಿಷದ ವಿಡಿಯೋ ಅದು, ವ್ಯಕ್ತಿಯೊಬ್ಬನ ಬಾಯಿಗೆ ಟೇಪ್ ಅಂಟಿಸಿ ಕೋಣೆಯೊಂದರಲ್ಲಿ ಕಟ್ಟಿ ಹಾಕಲಾಗಿತ್ತು.

ಡೊನಾಲ್ಡ್ ಟ್ರಂಪ್ ಹಾಗೂ ಬಿಳಿಯರಿಗೆ ಧಿಕ್ಕಾರ ಕೂಗುತ್ತ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಅವನಿಗೆ ಮನಬಂದಂತೆ ಥಳಿಸಿದ್ದಾರೆ. ಹಣೆಯ ಮೇಲೆ ಚಾಕುವಿನಿಂದ ಗೀರಿದ್ದಾರೆ. ಅರ್ಧ ಗಂಟೆವರೆಗೂ ಅವರ ಕ್ರೌರ್ಯ ಇದೇ ರೀತಿ ಮುಂದುವರಿದಿದೆ.

ಇದನ್ನೆಲ್ಲ ಫೇಸ್ ಬುಕ್ ನಲ್ಲಿ ದಾಳಿಕೋರರು ನೇರ ಪ್ರಸಾರ ಮಾಡಿದ್ದಾರೆ. ನಾಲ್ವರಿಂದ ಸುಖಾಸುಮ್ಮನೆ ಏಟು ತಿಂದ 18 ವರ್ಷದ ಯುವಕ ದಯನೀಯ ಸ್ಥಿತಿಯಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ. ಅದನ್ನು ಗಮನಿಸಿದ ಪೊಲೀಸರು ಅವನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಹಲ್ಲೆಗೊಳಗಾಗಿರುವ ಯುವಕನನ್ನು ಅಪಹರಿಸಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಯಾಕಂದ್ರೆ ಈ ಘಟನೆ ಬೆಳಕಿಗೆ ಬರುವ ಮುನ್ನವೇ ಆತ ಕಾಣೆಯಾಗಿದ್ದ. ಫೇಸ್ ಬುಕ್ ಲೈವ್ ನಲ್ಲಿ ನೀಚ ಕೆಲಸ ಮಾಡಿದ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ. ದುಷ್ಕರ್ಮಿಗಳು ಅಪ್ ಲೋಡ್ ಮಾಡಿದ್ದ ಹಲ್ಲೆಯ ಲೈವ್ ದೃಶ್ಯವನ್ನು ಸ್ವತಃ ಫೇಸ್ ಬುಕ್ ತೆಗೆದು ಹಾಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...