alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಇಲ್ಲದಿದ್ರೆ ಚಿಂತೆ ಬೇಡ, ಬಿಯರ್ ಇದ್ರೆ ಸಾಕು..!

ಬ್ರಿಟನ್ ವಿಜ್ಞಾನಿಗಳು ಬಿಯರ್ ಅನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗತ್ತಿನಾದ್ಯಂತ ಪೆಟ್ರೋಲ್ ಗೆ ಪರ್ಯಾಯವಾಗಿ ಬಳಸುತ್ತಿದ್ದ ಇಂಧನ ಅಂದ್ರೆ ಬಯೋ ಎಥನಾಲ್. ಆದ್ರೆ ಪೆಟ್ರೋಲ್ ಗೆ ಬದಲಿಯಾಗಿ ಎಥನಾಲ್ ಅನ್ನೇ ನೆಚ್ಚಿಕೊಳ್ಳಲು ಸಾಧ್ಯವಿಲ್ಲ.

ಯಾಕಂದ್ರೆ ಅದರಲ್ಲಿ ಶಕ್ತಿ ಸಾಂದ್ರತೆ ಕಡಿಮೆಯಿದೆ. ನೀರಿನ ಜೊತೆಗೆ ಸುಲಭವಾಗಿ ಮಿಶ್ರಣವಾಗುವುದರಿಂದ ವಾಹನದ ಎಂಜಿನ್ ಗೆ ಹಾನಿಯುಂಟಾಗುತ್ತದೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ. ಹಾಗಾಗಿ ಎಥನಾಲ್ ಅನ್ನು ಬುಟಾನಾಲ್ ಆಗಿ ಪರಿವರ್ತಿಸಲು ಬ್ರಿಸ್ಟಲ್ ಸ್ಕೂಲ್ ಆಫ್ ಕೆಮೆಸ್ಟ್ರಿ ವಿಜ್ಞಾನಿಗಳು ಶ್ರಮಿಸುತ್ತಿದ್ರು.

ಆಲ್ಕೋಹಾಲಿಕ್ ಡ್ರಿಂಕ್ಸ್ ನಲ್ಲಿ ಎಥನಾಲ್ ಅಂಶವಿರುವುದರಿಂದ ಅದನ್ನೇ ಪೆಟ್ರೋಲ್ ಗೆ ಪರ್ಯಾಯ ಇಂಧನವಾಗಿ ಪರಿವರ್ತಿಸಬಹುದು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನು ಬುಟಾನಾಲ್ ಆಗಿ ಪರಿವರ್ತಿಸಲು ಕೂಡ ಸಾಧ್ಯವಿದೆಯಂತೆ. ಹಾಗಾಗಿ ಪೆಟ್ರೋಲ್ ಕೊರತೆಯಾದಲ್ಲಿ ಬಿಯರ್ ಅನ್ನು ಇಂಧನವಾಗಿ ಬಳಸಲು ವಿಜ್ಞಾನಿಗಳು ಪ್ರಯೋಗ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...