alex Certify
ಕನ್ನಡ ದುನಿಯಾ       Mobile App
       

Kannada Duniya

63 ವರ್ಷಗಳ ಸಂಪ್ರದಾಯಕ್ಕೆ ಬಿತ್ತು ಬ್ರೇಕ್…!

ಕ್ಯಾಲಿಪೋರ್ನಿಯಾದ ಡಿಸ್ನಿಲ್ಯಾಂಡ್ ಉದ್ಯಾನವನ, ಯುವಕರನ್ನು ಸೆಳೆಯಲು ಹೊಸ ಪ್ಲಾನ್ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಉದ್ಯಾನವನದಲ್ಲಿ ಮದ್ಯವನ್ನು ಮಾರಲು ಯೋಜನೆ ಹೆಣೆದುಕೊಳ್ಳಲಾಗಿದೆ. ಮದ್ಯ ಪ್ರಿಯರನ್ನು ಸೆಳೆಯಲು ಡಿಸ್ನಿಲ್ಯಾಂಡ್, ಮದ್ಯ ಮಾರಾಟ ಮಳಿಗೆ ತೆರೆಯಲು ಸಿದ್ಧತೆ ನಡೆಸಿದೆ.

ಈ ಮಳಿಗೆಯಲ್ಲಿ ಬಿಯರ್, ವೈನ್ ಹಾಗೂ ಕಾಕ್ ಟೇಲ್ ಗಳು ಲಭ್ಯ ಇರಲಿವೆ. ಈ ಮೂಲಕ ಡಿಸ್ನಿಲ್ಯಾಂಡ್ ತನ್ನ ಸಂಪ್ರದಾಯಕ್ಕೆ ಬ್ರೇಕ್ ಹಾಕಲಿದೆ. 63 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಉದ್ಯಾನವನದಲ್ಲಿ ಮದ್ಯ ನಿಷೇಧವಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಮುಂದಿನ ವರ್ಷದಿಂದ ಮದ್ಯದ ಅಂಗಡಿ ಡಿಸ್ನಿಲ್ಯಾಂಡ್ ನಲ್ಲಿ ತಲೆ ಎತ್ತಲಿದೆ. ಮಳಿಗೆಯಲ್ಲಿ ವಿಶಿಷ್ಠ ಮದ್ಯಗಳು ಗ್ರಾಹಕರನ್ನು ಆಕರ್ಷಿಸಲಿವೆ.

ಮದ್ಯವನ್ನು ನಿಗದಿಪಡಿಸಲಾದ ಸ್ಥಳದಲ್ಲಿ ಮಾತ್ರ ಕುಡಿಯಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತೆ. ಪಾರ್ಕ್ ಗಳಲ್ಲಿ ಮದ್ಯದ ಬಾಟಲ್ ಹಿಡಿದು ತಿರುಗಾಡಲು ನಿಷೇಧ ಹೇರಲಾಗಿದೆ.

1955 ರಲ್ಲಿ ವಾಲ್ಟ್ ಡಿಸ್ನಿ ಈ ಉದ್ಯಾನವನ್ನು ನಿರ್ಮಿಸಿದಾಗ ಮದ್ಯಕ್ಕೆ ನಿಷೇಧ ಹೇರಿದ್ದರು. ಕಾರಣ ಈ ಪಾರ್ಕ್ ಕುಟುಂಬ ಸ್ನೇಹಿಯಾಗಿರಬೇಕೆಂಬ ಅಭಿಲಾಷೆ ಅವರದ್ದಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...