alex Certify
ಕನ್ನಡ ದುನಿಯಾ       Mobile App
       

Kannada Duniya

ವಂಚಿಸಿದ ಯುವತಿಗೆ ‘ಪ್ರೇಮಿಗಳ ದಿನ’ ದಂದೇ ಕಾದಿತ್ತು ಶಾಕ್

dc-Cover-38rcli9bighiv9ttcq2i3mg771-20160215120829.Medi

ತನಗೆ ಗೊತ್ತಿಲ್ಲದಂತೆ ಮತ್ತೊಬ್ಬನೊಂದಿಗೂ ಪ್ರೀತಿಯಲ್ಲಿ ಮುಳುಗಿದ್ದ ಯುವತಿಗೆ ಪ್ರೇಮಿಯೊಬ್ಬ ‘ಪ್ರೇಮಿಗಳ ದಿನ’ ದಂದೇ ಭರ್ಜರಿ ಶಾಕ್ ನೀಡಿದ್ದಾನೆ. ಈ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದು, ಅದೀಗ ವೈರಲ್ ಆಗಿದೆ.

ಕೈಲ್ ಬೊಗೆಸ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಮತ್ತೊಬ್ಬನೊಂದಿಗೂ ಸಂಬಂಧ ಇಟ್ಟುಕೊಂಡಿರುವ ವಿಷಯ ಕೈಲ್ ಗೆ ಗೊತ್ತಾಗಿದೆ. ಆಕೆಗೆ ಬುದ್ದಿ ಕಲಿಸಲು ನಿರ್ಧರಿಸಿದ ಆತ, ತನ್ನ ಪ್ರೇಯಸಿ ಮತ್ತೊಬ್ಬನೊಂದಿಗೆ ಸಂಬಂಧ ಹೊಂದಿದ್ದ ವಿವರಗಳನ್ನೆಲ್ಲಾ ಕಲೆ ಹಾಕಿದ್ದಾನೆ.

ಕಡೆಗೆ ಆಕೆಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ ಕೈಲ್, ಇದಕ್ಕಾಗಿ ‘ಪ್ರೇಮಿಗಳ ದಿನ’ ವನ್ನೇ ಆಯ್ದುಕೊಂಡಿದ್ದಾನೆ. ಅಂದು ಆಕೆಯ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಕಣ್ಣಿನ ಪಟ್ಟಿ ಬಿಚ್ಚಿದ ವೇಳೆ ಮನೆಯಲ್ಲಿ ಹರಡಿದ್ದ ಗುಲಾಬಿಯನ್ನು ಕಂಡು ಪ್ರೇಯಸಿ ಖುಷಿಯಾಗಿದ್ದಾಳೆ. ಗಿಫ್ಟ್ ನೀಡುವುದಾಗಿ ಹೇಳಿದ ಕೈಲ್ ಮತ್ತೇ ಆಕೆಯ ಕಣ್ಣಿಗೆ ಪಟ್ಟಿ ಕಟ್ಟಿ ತಾನು ಸಂಗ್ರಹಿಸಿದ್ದ ವಿವರದ ಫೈಲ್ ಅನ್ನು ಆಕೆಗೆ ನೀಡಿದ್ದಾನೆ. ಕಣ್ಣ ಪಟ್ಟಿ ಬಿಚ್ಚಿದ ವೇಳೆ ಇದನ್ನು ನೋಡುತ್ತಿದ್ದಂತೆಯೇ ಆಕೆ ಶಾಕ್ ಗೆ ಒಳಗಾಗಿದ್ದಾಳೆ. ಬಳಿಕ ಕೈಲ್ ‘ಗೆಟ್ ಔಟ್ ಆಫ್ ಮೈ ಹೌಸ್’ ಎಂದು ಹೇಳಿ ಆಕೆಯನ್ನು ಹೊರ ಹಾಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...