alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ಅನಿಯಮಿತ ನೆಟ್, ಎಸ್ಎಂಎಸ್ ನೀಡುವ ಸಿಮ್

ಸಿಮ್ ತಯಾರಿಕಾ ಕಂಪನಿ ಚಾಟ್ ಸಿಮ್ ಗುರುವಾರ ಇಟಲಿಯಲ್ಲಿ  ಹೊಸ ಚಾಟ್ ಸಿಮ್ 2 ಬಿಡುಗಡೆ ಮಾಡಿದೆ. ಈ ಸಿಮ್ ನಲ್ಲಿ ಕಂಪನಿ ಅನಿಯಮಿತ ಇಂಟರ್ನೆಟ್ ಹಾಗೂ ಅನಿಯಮಿತ ಎಸ್ಎಂಎಸ್ ಸೌಲಭ್ಯ ನೀಡಲಿದೆಯಂತೆ. ವಿಶೇಷವೆಂದ್ರೆ ಈ ಸೇವೆ ಪಡೆಯಲು ಗ್ರಾಹಕರು ಹಣ ನೀಡಬೇಕಾಗಿಲ್ಲ. ಹಾಗೆ ಯಾವುದೇ ಮಿತಿಯಿಲ್ಲ.

ಚಾಟ್ ಸಿಮ್ ವಾರ್ಷಿಕ ಯೋಜನೆ ಪ್ರಕಾರ, ಸುಮಾರು 165 ದೇಶಗಳಿಗೆ ಸಂದೇಶ ಕಳುಹಿಸುವ ಸೌಲಭ್ಯ ಹೊಂದಿದೆ. ಮಾರ್ಚ್ 26ರಿಂದ ಏಪ್ರಿಲ್ 1 ರವರೆಗೆ ಬಾರ್ಸಿಲೊನಾದಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2018ರಲ್ಲಿ ಈ ಸಿಮ್ ಪರಿಚಯಿಸಲಾಗುವುದು. ಇದೇ ವೇಳೆ ಚಾಟ್ ಸಿಮ್-2ನ ಇತರ ಫೀಚರ್ ಹೊರ ಬೀಳುವ ಸಾಧ್ಯತೆಯಿದೆ.

ಶೂನ್ಯ ರೇಟಿಂಗ್ ಪರಿಕಲ್ಪನೆಯಲ್ಲಿ ಚಾಟ್ ಸಿಮ್ -2 ನಡೆಯಲಿದೆ. ಫೋಟೋ, ವಿಡಿಯೋ, ಧ್ವನಿ ಕರೆಗಳಿಗಾಗಿ ಬಳಕೆದಾರರು ಸ್ವಲ್ಪ ಪ್ರಮಾಣದಲ್ಲಿ ಹಣ ನೀಡಬೇಕಾಗುತ್ತದೆ. ಕಂಪನಿ ವಿಶ್ವದಾದ್ಯಂತ 165 ದೇಶಗಳ 250ಕ್ಕೂ ಹೆಚ್ಚು ದೂರ ಸಂಪರ್ಕ ಜಾಲದ ಜೊತೆ ಕೆಲಸ ಮಾಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...