alex Certify
ಕನ್ನಡ ದುನಿಯಾ       Mobile App
       

Kannada Duniya

46 ಸಾವಿರ ರೂಪಾಯಿಗೆ ಮಾರಾಟವಾಯ್ತು ಕಾಂಡೋಮ್

animalcondome_1

ಬಳಸಿರುವ ಕಾಂಡೋಮನ್ನು ಫ್ರೀನಲ್ಲಿ ಕೊಡ್ತೀನಿ ಅಂದ್ರೂ ಯಾರೂ ತೆಗೆದುಕೊಳ್ಳೋದಿಲ್ಲ. ಆದ್ರೆ ಇತ್ತೀಚೆಗೆ 200 ವರ್ಷ ಹಳೆಯದಾದ ಕಾಂಡೋಮ್ 46 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಸುಮಾರು 18, 19ನೇ ಶತಮಾನದ ಇದನ್ನು ಕುರಿ ಅಥವಾ ಹಂದಿ ಕರುಳಿನಿಂದ ಮಾಡಲಾಗಿದೆಯಂತೆ.

19 ಸೆಂಟಿಮೀಟರ್ ಎತ್ತರದ ಕಾಂಡೋಮ್ ಫ್ರಾನ್ಸ್ ನಲ್ಲಿ ಸಿಕ್ಕಿದೆ. ಆಗಿನ ಕಾಲದಲ್ಲಿ ಇದನ್ನು ಕೇವಲ ಶ್ರೀಮಂತರು ಮಾತ್ರ ಬಳಸುತ್ತಿದ್ದರಂತೆ. ಇದನ್ನು ಕುರಿ ಕರಳು ಅಥವಾ ಹಂದಿಯಿಂದ ಮಾಡ್ತಾ ಇದ್ದರು. ಸಿಕ್ಕಿರುವ ಕಾಂಡೋಮ್ 15 ಸೆಂಟಿಮೀಟರ್ ಉದ್ದವಿದೆ. ಈಗ ಸಿಗುವ ಕಾಂಡೋಮ್ ಗಳು 18 ಸೆಂಟಿಮೀಟರ್ ಉದ್ದವಿರುತ್ತದೆ.

ಫ್ರಾನ್ಸ್ ನಲ್ಲಿ ಸಿಕ್ಕ ಇದನ್ನು ಆನ್ಲೈನ್ ನಲ್ಲಿ ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಅನೇಕರು ಆಸಕ್ತಿ ತೋರಿಸಿದರು. ಹಾಗಾಗಿ ಇದರ ಬೆಲೆ ಏರ್ತಾ ಹೋಯ್ತು. ಕೊನೆಯದಾಗಿ 46 ಸಾವಿರ ರೂಪಾಯಿಗೆ ಆಂಸ್ಟರ್ಡ್ಯಾಮ್ ವ್ಯಕ್ತಿಯೊಬ್ಬ ಖರೀದಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...