alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀದೇವಿ ಸಾವಿಗೂ ಮುನ್ನ ಹೋಟೆಲ್ ಕೋಣೆಯಲ್ಲಿ ನಡೆದಿದ್ದೇನು?

ಲೇಡಿ ಅಮಿತಾಭ್ ಅಂತಾನೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿ ಅಕಾಲಿಕ ಮರಣದಿಂದ ಇಡೀ ಚಿತ್ರರಂಗಕ್ಕೆ ಗರಬಡಿದಂತಾಗಿದೆ. ಶ್ರೀದೇವಿ ಸಾವನ್ನು ಅಭಿಮಾನಿಗಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಸಾವಿಗೂ ಕೆಲವೇ ಕ್ಷಣಗಳ ಮುನ್ನ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಜೊತೆಗೆ ಡಿನ್ನರ್ ಡೇಟ್ ಗೆ ತೆರಳಲು ಸಜ್ಜಾಗುತ್ತಿದ್ರು.

ಪತ್ನಿಗೆ ಸರ್ ಪ್ರೈನ್ ಕೊಡಬೇಕೆಂದು ಬೋನಿ ಕಪೂರ್ ಮುಂಬೈನಿಂದ ಹೊರಟು ದುಬೈಗೆ ಬಂದಿದ್ರು. ಶ್ರೀದೇವಿ ಉಳಿದುಕೊಂಡಿದ್ದ ಜುಮೆರಾ ಎಮಿರೇಟ್ಸ್ ಟವರ್ ಹೋಟೆಲ್ ಗೆ ಬಂದ ಬೋನಿ ಕಪೂರ್, ನಿದ್ದೆ ಮಾಡುತ್ತಿದ್ದ ಪತ್ನಿಯನ್ನು ಎಬ್ಬಿಸಿದ್ದರಂತೆ.

ಸುಮಾರು 15 ನಿಮಿಷ ಇಬ್ಬರೂ ಮಾತನಾಡಿದ್ದಾರೆ. ನಂತರ ಡಿನ್ನರ್ ಗೆ ಹೋಗೋಣವೆಂದು ಬೋನಿ ಕಪೂರ್ ಪತ್ನಿಗೆ ತಿಳಿಸಿದ್ರು. ಅದಕ್ಕೆ ಒಪ್ಪಿದ ಶ್ರೀದೇವಿ ಫ್ರೆಶ್ ಆಗಲು ಬಾತ್ ರೂಮಿಗೆ ತೆರಳಿದ್ದಾರೆ. 20 ನಿಮಿಷಗಳಾದ್ರೂ ಪತ್ನಿ ಬಾತ್ ರೂಮಿನಿಂದ ಹೊರಗೆ ಬರದೇ ಇದ್ದಿದ್ದನ್ನು ನೋಡಿ ಬೋನಿ ಕಪೂರ್, ಕರೆಯಲು ತೆರಳಿದ್ರು.

ಆದ್ರೆ ಒಳಗಿನಿಂದ ಉತ್ತರವೇ ಬರಲಿಲ್ಲ, ಬಾಗಿಲನ್ನು ಕೂಡ ತೆರೆಯಲಿಲ್ಲ. ನಂತರ ಬಾಗಿಲನ್ನು ಜೋರಾಗಿ ತಳ್ಳಿ ತೆರೆದ ಬೋನಿ ಕಪೂರ್ ಒಳಹೋಗಿ ನೋಡುವಷ್ಟರಲ್ಲಿ ಶ್ರೀದೇವಿ ನೀರು ತುಂಬಿದ್ದ ಬಾತ್ ಟಬ್ ನಲ್ಲಿ ನಿಶ್ಚಲವಾಗಿ ಮಲಗಿದ್ರು.

ಕೂಡಲೇ ಬೋನಿ ಕಪೂರ್ ತಮ್ಮ ಸ್ನೇಹಿತರಿಗೆ ವಿಷಯ ತಿಳಿಸಿದ್ರು. ಸ್ಥಳಕ್ಕೆ ಬಂದ ಪೊಲೀಸರು ಶ್ರೀದೇವಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಅಷ್ಟರಲ್ಲಾಗ್ಲೇ ಶ್ರೀದೇವಿ ಕೊನೆಯುಸಿರೆಳೆದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...