alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಮೈನಡುಗಿಸುವಂಥ ಘಟನೆ

accident-china-cctv_650x400_41501651287

ಚೀನಾದಲ್ಲಿ ಭೀಕರ ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಹಾಗೂ ದಂಪತಿ ಅದೃಷ್ಟವಶಾತ್ ಪಾರಾಗಿದ್ದಾರೆ. ಕ್ಸಿಯಾಮೆನ್ ಎಂಬಲ್ಲಿ ಹೈವೇಯಲ್ಲಿ ದಂಪತಿ ಕಾರು ನಿಲ್ಲಿಸಿ ಕೆಳಗಿಳಿದಿದ್ರು.

ಶರವೇಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ನಡುವೆಯೇ ರಸ್ತೆ ದಾಟಲು ಮುಂದಾಗಿದ್ದಾರೆ. ಈ ವೇಳೆ ಎಸ್ ಯು ವಿ ಒಂದು ವೇಗವಾಗಿ ಬಂದು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಸ್ವಲ್ಪ ಪಕ್ಕಕ್ಕೆ ಸರಿದು ದಂಪತಿ ತಪ್ಪಿಸಿಕೊಂಡಿದ್ದಾರೆ. ಕಾರು ಹಾಗೂ ಈ ಕುಟುಂಬದ ನಡುವೆ ಕೇವಲ 4 ಇಂಚುಗಳ ಅಂತರವಿತ್ತು.

ಸ್ವಲ್ಪ ಹೆಚ್ಚುಕಡಿಮೆಯಾಗಿದ್ರೂ ನಾಲ್ವರೂ ಕಾರಿನಡಿ ಸಿಕ್ಕು ಅಪ್ಪಚ್ಚಿಯಾಗುತ್ತಿದ್ರು. ನಡುರಸ್ತೆಯಲ್ಲಿ ನಿಂತಿದ್ದ ದಂಪತಿ ಮತ್ತು ಮಕ್ಕಳಿಗೆ ಡಿಕ್ಕಿ ಹೊಡೆಯುವುದರಲ್ಲಿದ್ದ ಕಾರು, ನಂತರ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅದಾದ್ಮೇಲೆ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ನಿಂತಿದೆ. ಜುಲೈ 23ರಂದು ನಡೆದಿರುವ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...