alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ಬಚಾವ್ ಆಗೋದು ಸುಲಭವಲ್ಲ: ಜೈಲಿನ ವಿಡಿಯೋ ಕಳುಹಿಸಿದ ಸಿಬಿಐ

ಮದ್ಯದ ದೊರೆ ವಿಜಯ್ ಮಲ್ಯ ಈಗ ದೇಶದ್ರೋಹಿ ಪಟ್ಟಿ ಸೇರಿದ್ದಾರೆ. ಭಾರತೀಯ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೆ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯಗೆ ಸಂಕಷ್ಟ ತಪ್ಪಿದ್ದಲ್ಲ. ಮಲ್ಯ ಹಸ್ತಾಂತರ ಮಾಡುವಂತೆ ಭಾರತ, ಲಂಡನ್ ಸರ್ಕಾರವನ್ನು ಕೋರಿತ್ತು.

ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಭಾರತಕ್ಕೆ ಬರುವುದನ್ನು ತಪ್ಪಿಸಿಕೊಳ್ಳಲು ಮಲ್ಯ ಕೋರ್ಟ್ ಮುಂದೆ ಭಾರತಕ್ಕೆ ಅವಮಾನ ಮಾಡಿದ್ದರು. ಭಾರತದ ಜೈಲಿನ ವಾತಾವರಣ ಚೆನ್ನಾಗಿಲ್ಲ. ಹಾಗಾಗಿ ಭಾರತಕ್ಕೆ ನನ್ನನ್ನು ಹಸ್ತಾಂತರಿಸಬೇಡಿ ಎಂದಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಕೋರ್ಟ್, ಜೈಲಿನ ಫೋಟೋ, ವಿಡಿಯೋ ಕಳಿಸಿಕೊಡುವಂತೆ ಸೂಚನೆ ನೀಡಿತ್ತು. ಸಿಬಿಐ, ಆರ್ಥರ್ ರೋಡ್ ಜೈಲಿನ 12ನೇ ಬ್ಯಾರಕ್ ನ ವಿಡಿಯೋವನ್ನು ಕಳುಹಿಸಿದೆ. ಜೈಲಿನ 12ನೇ ಬ್ಯಾರಕ್ ಗೆ ಸರಿಯಾಗಿ ಗಾಳಿ, ಬೆಳಕು ಬರುತ್ತದೆ. ಶೌಚಾಲಯದ ವ್ಯವಸ್ಥೆಯಿದೆ. ಮನರಂಜನೆಗೆ ಟಿವಿಯಿದೆ. ದಿಂಬು,ಹಾಸಿಗೆ ವ್ಯವಸ್ಥೆಯಿದೆ. ಬಟ್ಟೆ ಒಗೆಯುವ ವ್ಯವಸ್ಥೆಯಿದೆ. ಯಾವುದೇ ಭಯವಿಲ್ಲದೆ ಗ್ರಂಥಾಲಯಕ್ಕೆ ಹೋಗಬಹುದು. ಜೊತೆಗೆ ಬ್ಯಾರಕ್ 12 ಪ್ರತ್ಯೇಕವಾಗಿದ್ದು, ಕೇವಲ 6 ಮಂದಿ ಅಲ್ಲಿರಬಹುದು. ಹಾಗಾಗಿ ತುಂಬಾ ಗಲಾಟೆಯಿರುವುದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ಮೂಲೆ ಮೂಲೆಯನ್ನು ವಿಡಿಯೋ ಮಾಡಲಾಗಿದ್ದು, ಮಲ್ಯ ಮತ್ತೊಂದು ಕಾರಣ ನೀಡದಿರಲಿ ಎಂದು ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಬಗ್ಗೆ ಲಂಡನ್ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...