alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಳ ಬಿಡಿಸಿಕೊಂಡು ಪೊಲೀಸ್ ವಾಹನದಲ್ಲೇ ಎಸ್ಕೇಪ್ ಆಗ್ತಿದ್ಲು ಕಳ್ಳಿ

ಅಮೆರಿಕದ ಟೆಕ್ಸಾಸ್ ನ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಯುವತಿಯೊಬ್ಳು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾಳೆ. ಆಕೆಯ ಕೈಗೆ ಕೋಳ ತೊಡಿಸಿ ಪೊಲೀಸರು ಕಾರಿನಲ್ಲಿ ಕೂರಿಸಿದ್ರು. ಸಾಕಷ್ಟು ಕಸರತ್ತು ಮಾಡಿದ ಆಕೆ ಕೋಳ ಬಿಡಿಸಿಕೊಂಡಿದ್ದಾಳೆ.

ಕೊನೆಗೆ ಪೊಲೀಸರ ಕಾರು ತೆಗೆದುಕೊಂಡು ಅಲ್ಲಿಂದ ಹೊರಟುಬಿಟ್ಟಿದ್ದಾಳೆ. ಕಳ್ಳಿಯ ಚಾಲಾಕಿತನ ನೋಡಿ ಗಾಬರಿ ಬಿದ್ದ ಪೊಲೀಸರು, ಕೂಡಲೇ ಇನ್ನೊಂದು ವಾಹನದಲ್ಲಿ ಹೊರಟು ಅವಳನ್ನು ಚೇಸ್ ಮಾಡಿದ್ದಾರೆ. ಸುಮಾರು 23 ನಿಮಿಷಗಳ ಬಳಿಕ ಮತ್ತೆ ಕಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಅದನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಬ್ಯೂಟಿ ಸ್ಟೋರ್ ಒಂದ್ರಲ್ಲಿ ಮಹಿಳೆ ಕಳ್ಳತನ ಮಾಡಿದ್ಲು. ಎರಡನೇ ಬಾರಿ ಬಂಧನ ತಪ್ಪಿಸಿಕೊಳ್ಳಲು 100 ಕಿಮೀ ವೇಗದಲ್ಲಿ ಪೊಲೀಸರ ಕಾರು ಚಲಾಯಿಸಿಕೊಂಡು ಹೋಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...