alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ನೆಲಕ್ಕಪ್ಪಳಿಸುವ ದೃಶ್ಯ

plane-crashes-on-road_65ಅಮೆರಿಕಾದ ವಾಷಿಂಗ್ಟನ್ ನ ಜನನಿಬಿಡ ಟ್ರಾಫಿಕ್ ನಲ್ಲಿ ಸಿಗ್ನಲ್ ಗಾಗಿ ಕಾಯುತ್ತಿದ್ದವರಿಗೆ ಆಗಸದಲ್ಲಿ ಕಂಡ ದೃಶ್ಯವೊಂದು ಆಘಾತಕ್ಕೊಳಗಾಗುವಂತೆ ಮಾಡಿದೆ. ತೀರಾ ಕೆಳ ಮಟ್ಟದಲ್ಲಿ ಹಾರಿ ಬಂದ ವಿಮಾನವೊಂದು ಕಣ್ಣ ಮುಂದೆಯೇ ಪತನವಾಗಿದೆ.

ಸನಿಹದ ಏರ್ಪೋರ್ಟ್ ನಿಂದ ಹಾರಿದ ಈ ವಿಮಾನ, ವಿದ್ಯುತ್ ತಂತಿ ತಗುಲಿದ ಪರಿಣಾಮ ಬೆಂಕಿಯುಂಡೆ ಉಗುಳುತ್ತಾ ರಸ್ತೆ ಮಧ್ಯೆಯೇ ಪತನಗೊಂಡಿದೆ. ಅದೃಷ್ಟವಶಾತ್ ವಿಮಾನದ ಪೈಲಟ್ ಹಾಗೂ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ರಸ್ತೆ ಮೇಲೆ ವಿಮಾನ ಅಪ್ಪಳಿಸಿದರೂ ಯಾವುದೇ ವಾಹನ ಸಂಚಾರವಿರದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಕಾರೊಂದರಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿದ್ದು, ಅದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...