alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನ ಜ್ಯೂಸ್ ಗೆ ಮೂತ್ರ ಬೆರೆಸಿದ ಮನೆಗೆಲಸದಾಕೆ

juice mixed with urineತನ್ನ ಮಾಲೀಕನಿಗಾಗಿ ಕೊಡಲು ತಯಾರಿಸಿಟ್ಟಿದ್ದ ಜ್ಯೂಸ್ ಗೆ ಮನೆಗೆಲಸದಾಕೆ ಮೂತ್ರ ಬೆರೆಸಿ ನೀಡಿದ ಆಘಾತಕಾರಿ ಘಟನೆ ಕುವೈಟ್ ನಲ್ಲಿ ನಡೆದಿದ್ದು, ಇದು ಗುಪ್ತವಾಗಿ ಅಡಗಿಸಿಟ್ಟಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತನ್ನ ಮನೆ ಕೆಲಸದಾಕೆಯ ಬಗ್ಗೆ ಸಂಶಯ ಹೊಂದಿದ್ದ ಮಾಲೀಕರು, ಅಡುಗೆ ಕೋಣೆಯಲ್ಲಿ ಗುಪ್ತ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದರೆನ್ನಲಾಗಿದೆ. ಅಡುಗೆ ತಯಾರಿಸುವಾಕೆ ಜ್ಯೂಸ್ ಮಾಡಿಟ್ಟಿದ್ದು, ಅದನ್ನು ಮನೆ ಮಾಲೀಕರಿಗೆ ನೀಡಲು ಕೆಲಸದಾಕೆಗೆ ಸೂಚಿಸಿ ಹೊರ ಹೋಗಿದ್ದಾಳೆ.

ಆಕೆ ಅತ್ತ ಹೋಗುತ್ತಿದ್ದಂತೆಯೇ ಮನೆಗೆಲಸದಾಕೆ ತಾನು ಅಡಗಿಸಿಟ್ಟುಕೊಂಡು ತಂದಿದ್ದ ಮೂತ್ರವನ್ನು ಅದಕ್ಕೆ ಸುರಿದು ಮಾಲೀಕನಿಗೆ ನೀಡಿದ್ದಾಳೆ. ಗುಪ್ತ ಕ್ಯಾಮರಾದಲ್ಲಿ ಇದು ಸೆರೆಯಾಗಿದ್ದು, ಅದನ್ನು ಬಹಿರಂಗಪಡಿಸಿರುವ ಮನೆ ಮಾಲೀಕ, ಇಂತಹ ಮನೆಗೆಲಸದವರ ಬಗ್ಗೆ ಜಾಗರೂಕರಾಗಿರಬೇಕೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...