alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರು ತಪ್ಪದೇ ಓದಿ ಈ ಸುದ್ದಿ

ಚೀನಾದಲ್ಲಿ ವಿಚಿತ್ರವಾದ ಘಟನೆಯೊಂದು ನಡೆದಿದೆ. ಗ್ರಾಹಕರ ಫುಡ್ ಆರ್ಡರ್ ತಲುಪಿಸಬೇಕಾದ ಡೆಲಿವರಿ ಬಾಯ್, ಗ್ರಾಹಕರ ಆಹಾರವನ್ನ ಗಡದ್ದಾಗಿ ಸೇವಿಸಿರುವ ಘಟನೆ ನಡೆಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳು ಈಗ ವಿಶ್ವದಾದ್ಯಂತ ವೈರಲ್ ಆಗಿಬಿಟ್ಟಿವೆ. ಚೀನಾದ ಸಿಹುಯ್ ನ ಗ್ವಾಂಡ್ಗೂ ಪ್ರಾಂತ್ಯದಲ್ಲಿ ಈ ವಿಚಿತ್ರವಾದ ಘಟನೆ ನಡೆದಿದೆ.

ಸಿಸಿ ಟಿವಿ ದೃಶ್ಯದಲ್ಲಿ ಗ್ರಾಹಕರ ಆಹಾರವನ್ನು ಸೇವಿಸುವ ಡೆಲಿವರಿ ಬಾಯ್ ಯಾರು ಅನ್ನೋದು ಪತ್ತೆಯಾಗಿಲ್ಲ. ಆದ್ರೆ ಚೀನಾದ ಪ್ರಖ್ಯಾತ ಆಹಾರ ಸರಬರಾಜು ಸಂಸ್ಥೆ ಮೇಯ್ಥೂನ್ ನ ಸಿಬ್ಬಂದಿ ಅನ್ನೋದು ಖಚಿತವಾಗಿದೆ. ಗ್ರಾಹಕರಿಗೆ ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಫುಡ್ ಕಂಟೇನರ್ಗಳನ್ನು ತೆರೆಯುವ ವ್ಯಕ್ತಿ ಅದರಲ್ಲಿರುವ ಆಹಾರವನ್ನು ಸೇವಿಸಿ ಸೂಪ್ ಕೂಡ ಕುಡಿಯುತ್ತಾನೆ. ಆನಂತರದಲ್ಲಿ ಮಿಕ್ಕ ಆಹಾರವನ್ನು ಗ್ರಾಹಕರಿಗೆ ತಲುಪಿಸ್ತಾನೆ.

ಸದ್ಯ ಈ ವ್ಯಕ್ತಿಯನ್ನು ಆಹಾರ ಸರಬರಾಜು ಮಾಡುವ ಸಂಸ್ಥೆ ಕೆಲಸದಿಂದ ವಜಾ ಮಾಡಲಾಗಿದೆ ಅಂತ ಹೇಳಲಾಗ್ತಿದೆ. ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋವನ್ನ 2ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋಗೆ ನಾನಾ ಬಗೆಯ ಕಾಮೆಂಟ್ ಗಳು ಬಂದಿವೆ.

Food delivery guy fired after being caught eating customer’s food in elevator

Food delivery guy fired after being caught eating customer’s food in elevator

Posted by Shanghaiist on Saturday, August 18, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...