alex Certify
ಕನ್ನಡ ದುನಿಯಾ       Mobile App
       

Kannada Duniya

ಹುಲಿಗೆ ಕೈತುತ್ತು ಕೊಡಲು ಹೋದಾಗ ಆಯ್ತು ಯಡವಟ್ಟು

ಹುಲಿಗೆ ಕೈತುತ್ತು ಕೊಡಲು ಹೋದ ವ್ಯಕ್ತಿಯೊಬ್ಬ ಅಪಾಯ ತಂದುಕೊಂಡಿದ್ದಾನೆ. ಚೀನಾದಲ್ಲಿ ಸರ್ಕಸ್ ಹುಲಿಯನ್ನು ಬೋನಿನಲ್ಲಿ ಇಡಲಾಗಿತ್ತು. ವ್ಯಕ್ತಿಯೊಬ್ಬ ಹುಲಿಗೆ ಆಹಾರ ಹಾಕುತ್ತಿದ್ದ. ತನ್ನ ಕೈಗಳನ್ನೇ ಬೋನಿನೊಳಕ್ಕೆ ಹಾಕಿ ವ್ಯಾಘ್ರಕ್ಕೆ ಮಾಂಸ ನೀಡಲು ಮುಂದಾಗಿದ್ದಾನೆ.

ಈ ವೇಳೆ ಹುಲಿ ಆತನ ಕೈಗೆ ಕಚ್ಚಿದೆ. ಎಷ್ಟು ಕೂಗಿಕೊಂಡ್ರೂ ಕಚ್ಚಿ ಹಿಡಿದಿದ್ದ ಕೈಗಳನ್ನು ಬಿಟ್ಟಿಲ್ಲ. ಸುಮಾರು 3 ನಿಮಿಷಗಳ ಕಾಲ ಹುಲಿ ಬಾಯಲ್ಲಿ ಸಿಕ್ಕು ಆ ವ್ಯಕ್ತಿ ಒದ್ದಾಡಿದ್ದಾನೆ. ಹೊರಗಿದ್ದ ಜನರೆಲ್ಲ ಕೋಲಿನಿಂದ ಬಡಿದು, ಕೂಗಾಡಿ ಹುಲಿಯನ್ನು ಬೆದರಿಸಿದ್ರು.

ಕೊನೆಗೆ ಹುಲಿ ಕಚ್ಚಿ ಹಿಡಿದಿದ್ದ ಕೈಯನ್ನು ಬಿಟ್ಟಿದೆ. ಆದ್ರೆ ಆ ವ್ಯಕ್ತಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿದ್ದ. ಆತನ ಕೈ ತುಂಡಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿವಿಧ ಸ್ಥಳಗಳಿಗೆ ತೆರಳಿ ಸರ್ಕಸ್ ಪ್ರದರ್ಶಿಸುವ ಕಂಪನಿಗೆ ಸೇರಿದ ಹುಲಿ ಇದು. ಸಂಜೆ ಸರ್ಕಸ್ ಶೋ ಇದ್ದಿದ್ರಿಂದ ಅಲ್ಲೇ ಕ್ಯಾಂಪ್ ಹಾಕಿ ತಯಾರಿ ಮಾಡಿಕೊಳ್ಳಲಾಗುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...