alex Certify
ಕನ್ನಡ ದುನಿಯಾ       Mobile App
       

Kannada Duniya

ನಡು ರಸ್ತೆಯಲ್ಲೇ ಬುರ್ಖಾಧಾರಿ ಮಹಿಳೆಯರ ಬಿಗ್ ಫೈಟ್

burkha women fightಸೌದಿ ಅರೇಬಿಯಾದ ಮುಖ್ಯ ರಸ್ತೆಯಲ್ಲೇ ಬುರ್ಖಾಧಾರಿ ಮಹಿಳೆಯರಿಬ್ಬರು ಫೈಟ್ ನಡೆಸಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ಯಂತ ಕಠಿಣ ಕಾನೂನು ಹೊಂದಿರುವ ಸೌದಿ ಅರೇಬಿಯಾದಲ್ಲಿ ಹಾಡಹಗಲೇ ಈ ಕೃತ್ಯ ನಡೆದಿರುವುದು ಅಚ್ಚರಿಯನ್ನುಂಟು ಮಾಡಿದೆ.

ಕಾರೊಂದರ ಪಕ್ಕ ನಿಂತಿರುವ ಈ ಮಹಿಳೆಯರು ಇದ್ದಕ್ಕಿದ್ದಂತೆಯೇ ಒಬ್ಬರ ಮೇಲೋಬ್ಬರು ಮುಗಿ ಬಿದ್ದಿದ್ದಾರೆ. ಕೆಳಗೆ ಬಿದ್ದರೂ ಬಿಡದೆ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ಈ ದೃಶ್ಯವನ್ನು ಮತ್ತೊಂದು ಕಾರಿನಲ್ಲಿದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಮಹಿಳೆಯರಿಬ್ಬರು ಯಾಕಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆಂಬುದು ತಿಳಿದುಬಂದಿಲ್ಲ. ಇವರಿಬ್ಬರ ಫೈಟ್ ದೃಶ್ಯವನ್ನು ಇದೇ ರಸ್ತೆಯಲ್ಲಿ ವಾಹನದಲ್ಲಿ ಸಾಗುತ್ತಿರುವವರು ಆಶ್ಚರ್ಯದಿಂದ ನೋಡಿ ಮುಂದೆ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...