alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ಪ್ರಯಾಣಿಕರ ಲಗೇಜ್ ಗೆ ಕನ್ನ

ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ನಿರ್ವಹಿಸುವ ಸಿಬ್ಬಂದಿ ಪ್ರಯಾಣಿಕರ ಲಗೇಜ್ ಗೆ ಕನ್ನ ಹಾಕುತ್ತಿದ್ದ ಪ್ರಸಂಗ ಮೊಬೈಲ್ ಕೆಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಕಳ್ಳತನ ಮಾಡಿದ್ದವನನ್ನು ತನಿಖೆಗೊಳಪಡಿಸಿ ಕೆಲಸದಿಂದ ತೆಗೆದು ಹಾಕಲಾಗಿದೆ.

ಸ್ಪೇನ್ ಇಬಿಜಾದಿಂದ ಮ್ಯಾಡ್ರಿಡ್ ಗೆ ರಯಾನ್ ಏರ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರೊಬ್ಬರು ಬ್ಯಾಗೇಜ್ ಕಳ್ಳತನವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಬಳಿಕ ಸಂಬಂಧಪಟ್ಟ ಅಧಿಕಾರಿಗೆ ದೂರು ಸಲ್ಲಿಸಿದ್ದರು.

ವಿಮಾನದಿಂದ ಕೆಳಗಿಳಿಸಲಾದ ಲಗೇಜ್ ಅನ್ನು ಟ್ರಾಲಿಯಲ್ಲಿ ಸಾಗಿಸುವಾಗ ಬ್ಯಾಗೇಜ್ ನಿರ್ವಾಹಕ ಬ್ಯಾಗ್ ಒಂದರೊಳಗೆ ಕೈ ಹಾಕಿ ಅದರಲ್ಲಿದ್ದ ಕೆಂಪು ಬಣ್ಣದ ಸ್ಪೀಕರ್ ತೆಗೆದು ತನ್ನ ಜಾಕೆಟ್ ಒಳಗೆ ಇಟ್ಟುಕೊಳ್ಳುವ ಸಂದರ್ಭ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತನ್ನ ಮಗನ ಹುಟ್ಟುಹಬ್ಬಕ್ಕೆಂದು ಸ್ಪೀಕರ್ ಉಡುಗೊರೆಯಾಗಿ ಖರೀದಿಸಿದ್ದು, ಪೊಲೀಸರು ಹಿಂದಿರುಗಿಸಿದ್ದಾರೆ. ಅದು ವಾಪಾಸು ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಸ್ಪೀಕರ್ ಕಳೆದುಕೊಂಡಿದ್ದ ಮಹಿಳೆ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...