alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕಿನ ಚಿಕಿತ್ಸೆಗೆ ಮನೆಯನ್ನೇ ಮಾರಿದರು !

cat 45678

ಪ್ರೀತಿ ಪಾತ್ರರು ಕಾಯಿಲೆ ಬಿದ್ದಾಗ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ತೀರಾ ದುಬಾರಿ ವೆಚ್ಚದ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದಿದ್ದಾಗ ಸಾಲ ಮಾಡಿ ಇಲ್ಲವೇ ಒಡವೆ ಅಡವಿಟ್ಟು ಹಣ ಹೊಂದಿಸಿಕೊಂಡು ಆಸ್ಪತ್ರೆಯ ಖರ್ಚು, ವೆಚ್ಛ ಭರಿಸುತ್ತೇವೆ. ಆದರೆ ಈ ದಂಪತಿಗಳು ಇದಕ್ಕಿಂತ ಭಿನ್ನವಾಗಿದ್ದಾರೆ.

ಅವರು ತಮ್ಮ ಮುದ್ದಾದ ಮತ್ತು ಪ್ರೀತಿಪಾತ್ರ ಬೆಕ್ಕಿನ ಚಿಕಿತ್ಸೆಗಾಗಿ ಹಣವಿಲ್ಲದ ಕಾರಣ ಮನೆಯನ್ನೇ ಮಾರಾಟ ಮಾಡಿದ್ದಾರೆ. ಮನುಷ್ಯರಿಗಾದರೆ ಇರಲಿ ಎನ್ನಬಹುದಿತ್ತು. ಆದರೆ ಬೆಕ್ಕಿನ ಚಿಕಿತ್ಸೆಗಾಗಿ ಮನೆ ಮಾರಿರುವುದು ವಿಶೇಷವಾಗಿದೆ. ರೊಮೇನಿಯಾದ ಆಂಡ್ರೆ ಗೋನ್ಸಿಯರ್ ಮತ್ತು ಅವರ ಪತ್ನಿ ತಮ್ಮ ಪ್ರೀತಿಯ ‘ಒಕಿ’ ಎಂಬ ಹೆಸರಿನ ಬೆಕ್ಕಿಗೆ ಪೆನ್ಸಿಲ್ವೆನಿಯಾದ ಪಶು ಚಿಕಿತ್ಸಾಲಯದಲ್ಲಿ ಕಿಡ್ನಿ ಕಸಿ ಮಾಡಿಸಿದ್ದಾರೆ. ಅಂದ ಹಾಗೇ ‘ಒಕಿ’ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿತ್ತು.

ಅದನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ ಆಂಡ್ರೆ ದಂಪತಿ, ಮನೆಯನ್ನೇ ಮಾರಿದ್ದಾರೆ. ವಿಮಾನ ಪ್ರಯಾಣ ವೆಚ್ಛ, ವೈದ್ಯಕೀಯ ಪರೀಕ್ಷೆ, ಹೋಟೆಲ್ ವೆಚ್ಛ ಹೀಗೆ ಎಲ್ಲಾ ಖರ್ಚು ಸೇರಿ ಮನೆ ಮಾರಿದ 19 ಲಕ್ಷ ರೂ. ಗಳನ್ನು ಬೆಕ್ಕಿನ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಇದನ್ನು ಹುಚ್ಚಾಟ ಎಂದವರಿಗೆ ಆಂಡ್ರೆ, ಅಂತಹವರು ತಮ್ಮ ಮಕ್ಕಳು ಅಥವಾ ತಂದೆ, ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...