alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬೆರಗಾಗಿಸುವ ಬೆಕ್ಕಿನ ವಿಡಿಯೋ..!

cat

ಪ್ರಾಣಿಗಳು ಅತ್ಯಂತ ಚುರುಕು, ಹೇಳಿದ್ದನ್ನ ಬೇಗನೆ ಕಲಿತುಕೊಳ್ಳುವ ಬುದ್ಧಿವಂತಿಕೆ ಅವುಗಳಲ್ಲಿದೆ. ನಾವೇನ್ ಮಾಡ್ತೀವೋ ಅದನ್ನು ನೋಡಿ ಕಲಿಯುವಷ್ಟು ಚತುರತೆ ಪ್ರಾಣಿಗಳಲ್ಲಿದೆ. ಮನುಷ್ಯರಿಗೇ ಕಷ್ಟ ಎನಿಸುವಂತಹ ಕಪ್ ಗೇಮ್ ನಲ್ಲಿ ಆರಾಮಾಗಿ ಗೆದ್ದಿರುವ ಬೆಕ್ಕೊಂದು ಈಗ ಇಂಟರ್ನೆಟ್ ಫೇವರಿಟ್ ಆಗ್ಬಿಟ್ಟಿದೆ.

4 ಕಪ್ ಗಳ ಪೈಕಿ ಚೆಂಡು ಯಾವುದರಲ್ಲಿದೆ ಅನ್ನೋದನ್ನು ಮುದ್ದಾದ ಬೆಕ್ಕು ಕರೆಕ್ಟಾಗಿ ಪತ್ತೆ ಮಾಡುತ್ತೆ. ಈ ವಿಡಿಯೋ ಯುಟ್ಯೂಬ್ ನಲ್ಲಿ ವೈರಲ್ ಆಗಿದ್ದು, ಈಗಾಗ್ಲೇ ಲಕ್ಷಕ್ಕೂ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದಾರೆ. ಮೊದಲು ಆರಾಮಾಗಿ ಬಾಕ್ಸ್ ಒಂದರಲ್ಲಿ ಮಲಗಿ ಬೆಕ್ಕು ಆಟಕ್ಕೆ ರೆಡಿಯಾಗುತ್ತೆ.

ವ್ಯಕ್ತಿಯೊಬ್ರು ಚೆಂಡನ್ನು ಕಪ್ ಗಳಲ್ಲಿ ಹಾಕಿ ಅದನ್ನು ಬದಲಾಯಿಸಿ ಬೆಕ್ಕಿಗೆ ಗೊಂದಲ ಮೂಡಿಸ್ತಾರೆ. ಆದ್ರೆ ಈ ಬೆಕ್ಕು ಎಷ್ಟು ಚಾಣಾಕ್ಷ ಅಂದ್ರೆ ಹತ್ತಾರು ಬಾರಿ ವೇಗವಾಗಿ ಜಾಗ ಬದಲಾಯಿಸಿದ್ರೂ ಚೆಂಡು ಯಾವ ಕಪ್ ನಲ್ಲಿದೆ ಅನ್ನೋದನ್ನು ನಿಖರವಾಗಿ ಹೇಳುತ್ತೆ. ಒಮ್ಮೆ ಮೂರು, ಮತ್ತೊಮ್ಮೆ ನಾಲ್ಕು ಕಪ್ ಗಳನ್ನಿಟ್ರೂ ಈ ಮುದ್ದಾದ ಬೆಕ್ಕನ್ನು ಸೋಲಿಸಲು ಸಾಧ್ಯವಾಗಿಲ್ಲ. ಬೆಕ್ಕಿನ ಬುದ್ಧಿವಂತಿಕೆ ನೋಡಿ ಎಲ್ಲರೂ ಬೆರಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...