alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಷಿಯಲ್ ಮೀಡಿಯಾ ಮೂಲಕ ಸಿಕ್ತು ಕಳೆದುಹೋಗಿದ್ದ ಬೆಕ್ಕು

cat

ಆಧುನಿಕ ಜಗತ್ತಿನಲ್ಲಿ ವಿಶ್ವವೇ ಒಂದು ಹಳ್ಳಿಯಂತಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಅದರ ಉಪಯೋಗದಷ್ಟೇ ದುರುಪಯೋಗವೂ ಆಗುತ್ತಿದೆ ಎಂಬುದಂತೂ ನಿಜ. ಪ್ರಸ್ತುತ ಪ್ರಮುಖ ಸಂಪರ್ಕ ಮಾಧ್ಯಮವಾಗಿರುವ ಸೋಷಿಯಲ್ ಮೀಡಿಯಾದಿಂದ ಕಳೆದುಹೋಗಿದ್ದ ಮುದ್ದಾದ ಬೆಕ್ಕೊಂದು ಮಾಲೀಕರ ಕೈ ಸೇರುವಂತಾಗಿದೆ.

ಇರಾಕ್ ನಲ್ಲಿ ಐಸಿಸ್ ಉಗ್ರರ ಉಪಟಳ ಮಿತಿಮೀರಿದ್ದು, ಅಸಂಖ್ಯಾತ ಮಂದಿ ದೇಶ ತೊರೆದು ಬೇರೆ ದೇಶಗಳಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಹೀಗೆ ಕಳೆದ ವರ್ಷ ನವೆಂಬರ್ ನಲ್ಲಿ ದೇಶ ತೊರೆದು ಹೊರಟಿದ್ದ ಸುವಾ ಅಲ್ ಅಲಾಫ್ ಎಂಬ ಮಹಿಳೆ ಗ್ರೀಸ್ ನಲ್ಲಿ ನೆಲೆಸಿದ್ದಾರೆ. ಇರಾಕ್ ನ ಮೊಸುಲ್ ಪಟ್ಟಣದಿಂದ ಹೊರಟಿದ್ದ, ಸುವಾ ಅಲ್ ಅಲಾಫ್, ಬೋಟ್ ನಲ್ಲಿ ಜನಜಂಗುಳಿಯಲ್ಲಿ ಪ್ರಯಾಣಿಸುವಾಗ ತಮ್ಮ ಕೈಯಲ್ಲಿದ್ದ ಪ್ರೀತಿ ಪಾತ್ರವಾಗಿದ್ದ ಕುಂಕುಶ್ ಎಂಬ ಬೆಕ್ಕನ್ನು ಕಳೆದುಕೊಂಡಿದ್ದರು.

ಆ ಬೆಕ್ಕು ಅಮೆರಿಕದ ಆಶ್ಲೆ ಅಂಡರ್ ಸನ್ ಎಂಬ ವ್ಯಕ್ತಿಗೆ ಸಿಕ್ಕಿದ್ದು, ಆತ ಅದಕ್ಕೆ ಡಯಾಸ್ ಎಂದು ಹೆಸರಿಟ್ಟಿದ್ದಲ್ಲದೇ, ಆ ಬೆಕ್ಕಿನ ಮಾಲೀಕರ ಹುಡುಕಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಯತ್ನ ನಡೆಸಿದ್ದ. ಅದರ ಫೋಟೋಗಳನ್ನು ಪೋಸ್ಟ್ ಮಾಡಿ, ವಾರಸುದಾರರ ಪತ್ತೆಗೆ ನೆರವು ಕೋರಿದ್ದ.

ಇದನ್ನು ಗಮನಿಸಿದ ಸುವಾ ಅಲ್ ಅಲಾಫ್ ಸಹೋದರ, ಅಶ್ಲೆ ಅಂಡರ್ ಸನ್ ಅವರನ್ನು ಸಂಪರ್ಕಿಸಿ ಬೆಕ್ಕನ್ನು ಪಡೆದುಕೊಂಡು ಮಾಲೀಕರ ಕೈಗೆ ಒಪ್ಪಿಸಿದ್ದು, ಕಳೆದುಹೋಗಿದ್ದ ಬೆಕ್ಕು ಮರಳಿ ಸಿಕ್ಕಿರುವುದಕ್ಕೆ ಸುವಾ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಬಹುಚರ್ಚಿತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...