alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕಾರಿಗಳ ವಶವಾಯ್ತು ವಿದೇಶದಿಂದ ತಂದ ಮುದ್ದಿನ ಬೆಕ್ಕು

ಗಲ್ಫ್ ರಾಷ್ಟ್ರದಿಂದ ತಂದಿದ್ದ ಬೆಕ್ಕೊಂದನ್ನು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಭಾರತೀಯ ಮೂಲದ ದಂಪತಿ ಮಾರ್ಚ್ 2 ರಂದು ಸೌದಿ ಏರ್ ಲೈನ್ಸ್ ಮೂಲಕ ಜೆಡ್ಡಾದಿಂದ ಆಗಮಿಸಿದ್ದರು. ಜೊತೆಗೆ ತಮ್ಮ ಮುದ್ದಿನ ಬೆಕ್ಕನ್ನೂ ಕರೆತಂದಿದ್ದರು. ಆದ್ರೆ ನಿಯಮದ ಪ್ರಕಾರ ಪ್ರಾಣಿಗಳನ್ನು ಕರೆತರುವಂತಿಲ್ಲ ಎಂದಿರೋ ಕಸ್ಟಮ್ಸ್ ಅಧಿಕಾರಿಗಳು, ಬೆಕ್ಕನ್ನು ವಶಕ್ಕೆ ಪಡೆದಿದ್ದಾರೆ. ಬೆಕ್ಕನ್ನು ಭಾರತಕ್ಕೆ ಕರೆತರಲು ಅವಶ್ಯಕವಾದ ದಾಖಲೆಗಳನ್ನು ದಂಪತಿ ತಂದಿರಲಿಲ್ಲ.

ಪ್ರಾಣಿಗಳನ್ನು ಕರೆತರಲು ಆ್ಯನಿಮಲ್ ಕ್ವಾರಂಟೈನ್ ಅಧಿಕಾರಿಗಳಿಂದ ಪರೀಕ್ಷಿಸಬೇಕು ಜೊತೆಗೆ ಆರೋಗ್ಯ ಪ್ರಮಾಣಪತ್ರವನ್ನು ಕೂಡ ಸಲ್ಲಿಸಬೇಕು. ಆದ್ರೆ ಕೊಚ್ಚಿ ಏರ್ ಪೋರ್ಟ್ ನಲ್ಲಿ ಕ್ವಾರಂಟೈನ್ ಸೌಲಭ್ಯವೇ ಇಲ್ಲ.

ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದ್ರಾಬಾದ್ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಪ್ರಾಣಿಗಳನ್ನು ತರಲು ಅವಕಾಶವಿದೆ. ಹಾಗಾಗಿ ದಂಪತಿ ದಂಡ ಪಾವತಿಸಿ ಬೆಕ್ಕನ್ನು ಕೊಂಡೊಯ್ಯಬೇಕಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...