alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ಸಂದರ್ಶನದಲ್ಲೇ ತಲೆ ಮೇಲೇರಿ ಕುಳಿತ ಬೆಕ್ಕು

ಸದ್ಯ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಸಖತ್​ ವೈರಲ್​ ಆಗ್ತಾ ಇದೆ. ಲೈವ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಒಬ್ಬರ ತಲೆ ಮೇಲೆ ಬೆಕ್ಕು ಹತ್ತಿ ಕುಳಿತುಕೊಂಡಿದೆ.

ಡಾ. ಜೆರ್ರಿ ತರ್ಗಲ್ಸಕಿ ಟಿವಿ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಸಾಕಿದ ಬೆಕ್ಕು ಅವರಿಗೆ ತೊಂದರೆ ಕೊಡಲು ಆರಂಭಿಸಿತು. ಬೆಕ್ಕು ನೇರವಾಗಿ ಬಂದು ಪ್ರೊಫೆಸರ್​ ಅವರ ತಲೆಯ ಮೇಲೆ ಕುಳಿತುಕೊಂಡಿತು.

ಪೊಲೆಂಡ್​​ನ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಟಿವಿ ಸಂದರ್ಶನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರೊಫೆಸರ್​​ ಜೆರ್ರಿ ಸಹ ಭಾಗವಹಿಸಿದ್ದರು. ಗಂಭೀರ ಚರ್ಚೆ ನಡೆಯುವ ವೇಳೆ ಪ್ರೊಫೆಸರ್​​ ಅವರತ್ತ ಬೆಕ್ಕು ಬಂದಿದೆ. ಜೆರ್ರಿ ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಾರ್ಯಕ್ರಮ ಮುಂದುವರೆಸಿದ್ರು. ಅದಾಗಲೇ ಬೆಕ್ಕು ನೇರವಾಗಿ ಪ್ರೊಫೆಸರ್​​ ಬೆನ್ನು ಹತ್ತಿ ಕಾಟ ನೀಡಿತು.

ಪ್ರೊಫೆಸರ್​​ ಮೈಮೇಲೆ ಹತ್ತಿದ ಬೆಕ್ಕು ಒಮ್ಮೆ ಕಾಲನ್ನು ಮುಖದ ಮುಂದೆ ತಂದ್ರೆ, ಇನ್ನೊಮ್ಮೆ ಬಾಲವನ್ನು ತಂದು ಕೀಟಲೆ ಕೊಡುತ್ತಿತ್ತು. ಆದರೆ ಇದಕ್ಕೆ ಗಮನ ನೀಡದ ಅವರು ಸಂದರ್ಶನ ಮುಗಿಸಿದ್ರು. ಈ ವಿಡಿಯೋ ಟ್ವಿಟ್ಟರ್ ನಲ್ಲಿ ಶೇರ್​ ಮಾಡಲಾಗಿದ್ದು, 6 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...