alex Certify
ಕನ್ನಡ ದುನಿಯಾ       Mobile App
       

Kannada Duniya

ಕೋತಿ ಮರಿಯನ್ನು ದತ್ತು ಪಡೆದವರ್ಯಾರು ಗೊತ್ತಾ ?

l_Cat-adopts-baby-1-1472126913ಮಕ್ಕಳಿಲ್ಲದವರು ಅನಾಥಾಶ್ರಮದಿಂದ ಮಕ್ಕಳನ್ನು ದತ್ತು ಪಡೆಯುವುದು, ಗಣ್ಯ ವ್ಯಕ್ತಿಗಳು ಹಿಂದುಳಿದ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕೇಳಿದ್ದೀರಿ. ಆದರೆ ಒಂದು ಅನಾಥ ಪ್ರಾಣಿ ಇನ್ನೊಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಅಂತಹ ಒಂದು ವಿಚಿತ್ರ ಘಟನೆ ರಷ್ಯಾದಲ್ಲಿ ನಡೆದಿದೆ.

ರಷ್ಯಾದ ಒಂದು ಪ್ರಾಣಿ ಸಂಗ್ರಹಾಲಯದಲ್ಲಿ ಕೋತಿಯೊಂದು ತನ್ನ ಮರಿಯನ್ನು ದೂರ ಮಾಡಿತ್ತು. ತಾಯಿಗೆ ಬೇಡವಾದ ಪುಟ್ಟ ಕೋತಿಮರಿಯನ್ನು ರೋಸನಿಕಾ ಎಂಬ ಬೆಕ್ಕು ಮಗುವಿನಂತೆ ನೋಡಿಕೊಂಡಿತ್ತು. ತಾಯಿಯಿಂದ ದೂರವಾಗಿರುವ ಕೋತಿಮರಿ ಈಗ ಬೆಕ್ಕನ್ನೇ ತನ್ನ ತಾಯಿಯೆಂದು ಭಾವಿಸಿದೆ.

ರೋಸನಿಕಾ ಬೆಕ್ಕಿಗೆ ತನ್ನದೇ ಆದ ಮರಿಗಳಿರಲಿಲ್ಲ. ಈಗ ಅದು ಕೋತಿಯ ಮರಿಯನ್ನೇ ತನ್ನದೆಂದು ಸಾಕುತ್ತಿದೆ. ಪುಟ್ಟ ಕೋತಿಮರಿ ಕೂಡ ಯಾವಾಗಲೂ ಬೆಕ್ಕಿನ ಮೈಮೇಲೆ ಕೂತಿರುತ್ತದೆ. ಕೋತಿ ಮರಿ ಸ್ವಲ್ಪ ದೊಡ್ಡದಾಗುವ ತನಕ ಅದು ಬೆಕ್ಕಿನ ಜೊತೆಯಲ್ಲೇ ಬೆಳೆಯುವುದು ಉತ್ತಮ ಎಂದು ಪ್ರಾಣಿ ಸಂಗ್ರಹಾಲಯದ ನಿರ್ವಾಹಕರು ಹೇಳಿದ್ದಾರೆ. ಹೀಗಾಗಿ ಈಗ ಬೆಕ್ಕಿಗೆ ಕೋತಿ ಮರಿಯನ್ನು ದತ್ತು ನೀಡಿದ್ದಾರೆ ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...