alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಳಿಗೆ ಹಾರುತ್ತವೆ ನೋಟುಗಳು: ಸಿಕ್ಕಿದ್ದಷ್ಟು ನಿಮಗೇನೇ !!

30964DB600000578-0-image-m-16_1453895063354

ಹಣ ಗಳಿಸೋದು ತುಂಬಾನೇ ಕಷ್ಟ. ಅಂತಹುದರಲ್ಲಿ ಗಾಳಿಯಲ್ಲಿ ನೋಟುಗಳು ಹಾರಿ ಬಂದರೆ..? ಒಂದು ನಿಮಿಷದಲ್ಲಿ ಹಾರಾಡುವ ನೋಟುಗಳನ್ನು ಎಷ್ಟು ಸಂಗ್ರಹಿಸುತ್ತೀರೊ ಅದು ನಿಮ್ಮದು. ಅದು ಉಚಿತವಾಗಿ. ಇಂತಹ ಅದ್ಭುತ ಸ್ಪರ್ಧೆಯೊಂದನ್ನು ಚೀನಾದ ಕಂಪನಿಯೊಂದು ಆಯೋಜಿಸಿ ಪ್ರವಾಸಿಗರನ್ನು ಸೆಳೆಯಲು ಯಶಸ್ವಿಯಾಗಿದೆ.

ಹೌದು. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಇಂತಹದೊಂದು ಸ್ಪರ್ಧೆಯನ್ನು ಸಾಂಗ್ಸಿಂಗ್ ಎನ್ನುವ ಕಂಪೆನಿ ಪ್ರವಾಸಿಗರನ್ನು ಆಕರ್ಷಿಸಲು ಆಯೋಜಿಸಿದ್ದು ಈ ಪ್ರಕಾರ ಗ್ಲಾಸ್ ಹೋಮ್ ನಲ್ಲಿ ಹಾಕಿದ ಹಣ ಗಾಳಿಯಲ್ಲಿ ಹಾರಾಡುತ್ತಿರುತ್ತದೆ. ಒಂದು ನಿಮಿಷದ ಅವಧಿಯಲ್ಲಿ ಹಾರಾಡುವ ಹಣದ ನೋಟಗಳನ್ನು ಒಳ ಹೋದವರು ಎಷ್ಟನ್ನು ಬೇಕಾದರೂ ಎತ್ತಿಕೊಳ್ಳಬಹುದಾಗಿದ್ದು ಜಾಸ್ತಿ ನೋಟುಗಳನ್ನು ಎತ್ತಿಕೊಳ್ಳುವವರು ಸ್ಪರ್ಧಾ ವಿಜೇತರಾಗುವುದರ ಜತೆಗೆ ಆದಷ್ಟು ಹಣದ ಒಡೆಯರಾಗಬಹುದು.

ಅಂದ ಹಾಗೆ ಚೀನಾದ ಸಾಂಗ್ಸಿಂಗ್ ಎಂಬ ಕಂಪೆನಿ ಆಯೋಜಿಸಿದ್ದ 10 ದಿನದ ಈ ಸ್ಪರ್ಧೆಗೆ ಬರೋಬ್ಬರಿ 5 ಮಿಲಿಯನ್ ಯಾನ್ ಹಣವನ್ನು ವೆಚ್ಚ ಮಾಡಿದ್ದು, ಈ ಸ್ಪರ್ಧೆಯಲ್ಲಿ ಮಹಿಳೆಯೊಬ್ಬರು ವಿಜೇತರಾಗಿದ್ದು, 18,300 ಯಾನ್ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...