alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಗೆ ಹಾಲಿವುಡ್ ನಟನಿಂದ ಲೈಂಗಿಕ ಕಿರುಕುಳ..!

ರ್ಯಾಂಬೋ ಖ್ಯಾತಿಯ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ರಾಕಿ ಹಾಗೂ ರ್ಯಾಂಬೋ ಸರಣಿಯ ಸಿನೆಮಾಗಳ ಮೂಲಕವೇ ಸಿಲ್ವೆಸ್ಟರ್ ಸಾಕಷ್ಟು ಜನಪ್ರಿಯರಾಗಿದ್ದಾರೆ. 1980ರ ದಶಕದಲ್ಲಿ ನಡೆದ ಘಟನೆ ಇದು, ಈಗ ಬೆಳಕಿಗೆ ಬಂದಿದೆ. ಸಿಲ್ವೆಸ್ಟರ್ ವಿರುದ್ಧ 16 ವರ್ಷದ ಬಾಲಕಿಯೊಬ್ಳು ಕೇಸ್ ದಾಖಲಿಸಿದ್ದಾಳೆ.

ಆಕೆ ಸಿಲ್ವೆಸ್ಟರ್ ಅಭಿಮಾನಿಯಾಗಿದ್ಲು. ಬಾಡಿಗಾರ್ಡ್ ಹಾಗೂ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಸಿಲ್ವೆಸ್ಟರ್ ಅವಳನ್ನು ಒತ್ತಾಯಿಸಿದ್ದರು ಅನ್ನೋ ಆರೋಪವಿದೆ. ಸಿಲ್ವೆಸ್ಟರ್ ನ ಬಾಡಿಗಾರ್ಡ್ ಆಗಿದ್ದ ಮೈಖೆಲ್ ಭಾತ್ ರೂಮಿಗೆ ಹೋಗಿದ್ದಾಗ, ಬಾಲಕಿ ಜೊತೆ ನಟ ಲೈಂಗಿಕ ಸಂಬಂಧ ಹೊಂದಿದ್ದರಂತೆ.

ಕೊನೆಗೆ ಬಾಡಿಗಾರ್ಡ್ ಜೊತೆಗೂ ಸೆಕ್ಸ್ ಮಾಡುವಂತೆ ಬಾಲಕಿಯನ್ನು ಸಿಲ್ವೆಸ್ಟರ್ ಒತ್ತಾಯಿಸಿದ್ದರು ಎನ್ನಲಾಗಿತ್ತು. ಈ ವಿಷಯವನ್ನು ಯಾರೊಂದಿಗಾದ್ರೂ ಬಾಯ್ಬಿಟ್ರೆ ತಲೆ ಒಡೆಯೋದಾಗಿ ಬೆದರಿಕೆ ಹಾಕಿದ್ದರು ಅಂತಾನೂ ಬಾಲಕಿ ಆರೋಪ ಮಾಡಿದ್ದಾಳೆ. ಇದೆಲ್ಲಾ ಕಟ್ಟುಕಥೆ ಅನ್ನೋದು ನಟನ ಸಮರ್ಥನೆ. ಆದ್ರೆ ಸತ್ಯ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...