alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಟಿ-20 ಪಂದ್ಯದ ಲೈವ್ ಟೆಲಿಕಾಸ್ಟ್, ಇತಿಹಾಸ ಬರೆದ ಸಿಪಿಎಲ್

ಕೆರಿಬಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಇತಿಹಾಸದಲ್ಲಿ ಹಿಂದೆಂದು ನಡೆದಿರದ ದಾಖಲೆಯೊಂದನ್ನ ನಿರ್ಮಿಸಿದೆ. ಆಗಸ್ಟ್ 8ರಿಂದ ಆರಂಭವಾಗಿರುವ ಆರು ತಂಡಗಳ ರೋಚಕ ಟಿ-20 ಹಣಾಹಣಿಯನ್ನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಲೈವ್ ಟೆಲಿಕಾಸ್ಟ್ ಮಾಡಿದ ಇತಿಹಾಸವನ್ನು ಕೆರಿಬಿಯಲ್ ಪ್ರೀಮಿಯರ್ ಲೀಗ್ ನಿರ್ಮಿಸಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ ನ ಎಲ್ಲಾ ಪಂದ್ಯಗಳು ಟ್ವಿಟ್ಟರ್ ನಲ್ಲಿ ನೇರ ಪ್ರಸಾರವಾಗಲಿದೆ. ಜಗತ್ತಿನ 54 ರಾಷ್ಟ್ರಗಳ ಜನರು ಟ್ವಿಟ್ಟರ್ ನಲ್ಲಿ ನೇರ ಪ್ರಸಾರವಾಗುವಂತಾ ಪಂದ್ಯಾವಳಿಯನ್ನ ವೀಕ್ಷಿಸಬಹುದಾಗಿದೆ.

ಭಾರತದ ಕ್ರಿಕೆಟ್ ಅಭಿಮಾನಿಗಳು ಕೂಡ ಪಂದ್ಯಾವಳಿಗೆ ಸಂಬಂಧಿಸಿದ 150 ಮ್ಯಾಚ್ ಹೈಲೈಟ್ಸ್ ವಿಡಿಯೋಗಳನ್ನ ನೋಡಬಹುದಾಗಿದೆ. ಇನ್ಸ್ಟ್ರೀಮ್ ವಿಡಿಯೋದ ಕೃಪೆ ಮತ್ತು ಪಂದ್ಯಾವಳಿ ಆಯೋಜಕರ ಸಹಯೋಗದಲ್ಲಿ ಹೀಗೊಂದು ಯೋಜನೆ ಜಾರಿಗೆ ಬಂದಿದೆ. ಜಗತ್ತಿನ ಕ್ರೀಡಾಭಿಮಾನಿಗಳ ಅಭಿಪ್ರಾಯ ಏಕಕಾಲದಲ್ಲಿ ಪ್ರತಿಯೊಂದು ಮ್ಯಾಚ್ ಗೂ ಸಿಕ್ತಿರೋದ್ರಿಂದ ಕ್ರಿಕೆಟ್ ನ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಲಿದೆಯಂತೆ.

ಆಗಸ್ಟ್ 8ರಂದು ಆರಂಭವಾಗಿರುವ ಈ ಕ್ರಿಕೆಟ್ ಟೂರ್ನಿ ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿದೆ. ವೆಸ್ಟ್ ಇಂಡೀಸ್ ನ ಹಲವು ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...