alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಗೂಡಲ್ಲಿ ಕೂಡಿಟ್ಟು ಪುಟ್ಟ ಬಾಲಕಿಗೆ ಹಿಂಸೆ

ಅಮೆರಿಕದ ವಿಸ್ಕನ್ಸಿನ್ ನಗರದಲ್ಲಿ 9 ವರ್ಷದ ಬಾಲಕಿಯೊಬ್ಬಳನ್ನು ನಾಯಿ ಪಂಜರದಲ್ಲಿ ಕೂಡಿ ಹಾಕ್ತಾ ಇದ್ದ ಇಬ್ಬರು ಕೇರ್ ಟೇಕರ್ ಗಳನ್ನು ಬಂಧಿಸಲಾಗಿದೆ. 48 ವರ್ಷದ ಡೇಲ್ ಡೀವರ್ಸ್ ಹಾಗೂ 47 ವರ್ಷದ ಗೇಯ್ಲ್ ಲಲೊಂಡೆ ಬಂಧಿತ ಆರೋಪಿಗಳು.

ಬಾಲಕಿ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಪ್ರಾಥಮಿಕ ಶಾಲೆಯೊಂದು ದೂರು ನೀಡಿತ್ತು. ಕೂಡಲೇ ತನಿಖೆಗೆ ಬಂಧ ಅಧಿಕಾರಿಗಳು, ನಾರ್ವೆಯ ಮನೆಯಲ್ಲಿ ನಾಯಿಯ ಪಂಜರವನ್ನು ಪತ್ತೆ ಮಾಡಿದ್ದಾರೆ. 4.10 ಅಡಿ ಎತ್ತರದ ಈ ಪಂಜರದಲ್ಲಿ ಕ್ರೂರಿಗಳು ಬಾಲಕಿಯನ್ನು ಬಂಧಿಸಿಡುತ್ತಿದ್ದರು.

ಈ ಮೂಲಕ ಬಾಲಕಿಗೆ ಮಾನಸಿಕ ಹಿಂಸೆ ನೀಡಿದ್ದಾರೆ. ಒಮ್ಮೊಮ್ಮೆ ರಾತ್ರಿಯಿಡೀ ಬಾಲಕಿಗೆ ಈ ಪಂಜರವೇ ಗತಿಯಾಗುತ್ತಿತ್ತು. ಆಕೆ ಹೊರಬರದಂತೆ ಲಾಕ್ ಮಾಡಲಾಗುತ್ತಿತ್ತು. ಬಾಲಕಿಯನ್ನು ರಕ್ಷಣೆ ಮಾಡಿರೋ ಪೊಲೀಸರು, ಪೋಷಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...