alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಳಿಯಿಂದ ಓಡುತ್ತೆ ವಿದ್ಯಾರ್ಥಿಗಳು ತಯಾರಿಸಿರೋ ಈ ಕಾರು

ಕೈರೋ: ಹೆಚ್ಚುತ್ತಿರುವ ತೈಲ ಬಳಕೆಯನ್ನು ತಪ್ಪಿಸಿ, ನೈಸರ್ಗಿಕ ಇಂಧನ ಶಕ್ತಿ, ಮರುಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈಜಿಪ್ಟ್‌ನ ಪದವಿ ವಿದ್ಯಾರ್ಥಿಗಳು ಹೊಸ ನಮೂನೆಯ ಕಾರನ್ನು ವಿನ್ಯಾಸಗೊಳಿಸಿದ್ದಾರೆ.

ಹೆಲ್ವಾನ್‌ ವಿಶ್ವವಿದ್ಯಾಲಯದ ಪ್ರಾಜೆಕ್ಟ್‌ಗಾಗಿ ಪೆಟ್ರೋಲಿಯಂ ಉತ್ಪನ್ನದ ಬದಲಾಗಿ ಇಂಧನವಾಗಿ ಆಕ್ಸಿಜನ್‌ ಬಳಸಿ, ಕಾರು ವಿನ್ಯಾಸ ಮಾಡಲಾಗಿದೆ. ಆಕ್ಸಿಜನ್‌ ಬಳಕೆ ಮಾಡುವುದರಿಂದ ಇಂಜಿನ್‌ ಕೂಲಿಂಗ್‌ ವ್ಯವಸ್ಥೆಯ ಅಗತ್ಯವಿಲ್ಲ. ಇದೇ ಯೋಜನೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಹೂಡಿಕೆದಾರರನ್ನು ಹುಡುಕಲಾಗುತ್ತಿದೆ ಎಂದು ವಿನ್ಯಾಸ ತಂಡದ ಮೊಹಮೊದ್‌ ಯಾಸಿರ್‌ ಹೇಳಿದ್ದಾರೆ.

ಸದ್ಯಕ್ಕೆ ಒಂದು ವ್ಯಕ್ತಿ ಮಾತ್ರ ಸಾಗುವಂತೆ ವಿನ್ಯಾಸ ಮಾಡಲಾಗಿದ್ದು, ಕಚ್ಚಾ ತೈಲದ ಬದಲಾಗಿ ಸಂಪೂರ್ಣವಾಗಿ ಆಕ್ಸಿಜನ್‌ ಬಳಕೆ ಮಾಡಲಾಗುತ್ತದೆ. ಗರಿಷ್ಟ 40 ಕಿ.ಮೀ ವೇಗದಲ್ಲಿ ಸಾಗಬಲ್ಲ ವಾಹನಕ್ಕೆ ಒಂದು ಬಾರಿ ಆಕ್ಸಿಜನ್‌ ತುಂಬಿದರೆ, 30ಕಿ.ಮೀ. ವರೆಗೆ ಸಾಗಬಲ್ಲದು. ಇದನ್ನು ವಿನ್ಯಾಸ ಹಾಗೂ ತಯಾರಿಸುವ ಖರ್ಚು 18 ಸಾವಿರ ಈಜಿಪ್ಟಿಯನ್ ಪೌಂಡ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...