alex Certify
ಕನ್ನಡ ದುನಿಯಾ       Mobile App
       

Kannada Duniya

ಜನರ ಮೇಲೆ ಕಾರು ನುಗ್ಗಿಸಿದ ಭೂಪ

car

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಾರನ್ನು ಜನರ ಮೇಲೆ ನುಗ್ಗಿಸಿದ್ದಾನೆ. ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಓರ್ವ ಮೃತಪಟ್ಟಿದ್ದಾನೆ. 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರವಾಸಿ ಸ್ಥಳವಾದ ಟೈಮ್ಸ್ ಸ್ಕ್ವೇರ್ ನಲ್ಲಿ ಮಟಮಟ ಮಧ್ಯಾಹ್ನ ಜನಸಂದಣಿ ಇತ್ತು. ರಾಂಗ್ ಸೈಡಿನಿಂದ ಬಂದ 26 ವರ್ಷದ ಯುವಕ ಬ್ರೊಂಕ್ಸ್ ಜನರ ಮೇಲೆ ಕಾರು ನುಗ್ಗಿಸಿದ್ದಾನೆ. ಕಾರಿನ ಮುಂದಿನ ಎರಡೂ ಚಕ್ರಗಳು ಗಾಳಿಯಲ್ಲಿತ್ತು. ಅಪಘಾತದ ರಭಸಕ್ಕೆ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ಚಾಲಕ ಈ ಹಿಂದೆ ಕೂಡ ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸಣ್ಣ ಪ್ರಮಾಣದ ಸ್ಫೋಟ ಕೂಡ ಸಂಭವಿಸಿದೆ. ಅಲ್ಲಿದ್ದ ಜನರೆಲ್ಲ ಬಾಂಬ್ ಸ್ಫೋಟಿಸಿದೆ ಅಂತಾನೇ ಭಾವಿಸಿದ್ದರು. ಇದು ಭಯೋತ್ಪಾದಕ ದಾಳಿಯಲ್ಲ ಅಂತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...