alex Certify
ಕನ್ನಡ ದುನಿಯಾ       Mobile App
       

Kannada Duniya

ಸುರಕ್ಷಿತ ಚಾಲನೆ ಬಗ್ಗೆ ವರದಿ ಮಾಡ್ತಿದ್ದಾಗ್ಲೇ ನಡೀತು ಅವಘಡ

ಕಾಕತಾಳೀಯ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್. ಅಟ್ಲಾಂಟಾದಲ್ಲಿ ಸುರಕ್ಷಿತ ವಾಹನ ಚಾಲನೆ ಬಗ್ಗೆ ವರದಿ ಮಾಡ್ತಿರೋ ಸಮಯದಲ್ಲೇ ಅಪಘಾತವೊಂದು ನಡೆದಿದೆ. WSB-TVಯ ವರದಿಗಾರ ಟಾಮ್ ರೇಗನ್ ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದ.

ಅಟ್ಲಾಂಟಾದಲ್ಲಿ ರಸ್ತೆಗಳೆಲ್ಲ ಸಂಪೂರ್ಣ ಹಿಮದಿಂದ ಆವೃತವಾಗಿರೋದ್ರಿಂದ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಅತ್ಯಂತ ಜಾಗರೂಕರಾಗಿ ಡ್ರೈವಿಂಗ್ ಮಾಡಬೇಕೆಂದು ಹೇಳುತ್ತಿದ್ದ. ಅದೇ ಸಮಯದಲ್ಲಿ ಆತನ ಹಿಂಭಾಗದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ.

ಅಮೆರಿಕದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು ಭಾರೀ ಹಿಮಪಾತವಾಗ್ತಿದೆ. ರಸ್ತೆಗಳು ಪೂರ್ತಿ ಮಂಜುಗಡ್ಡೆಯಿಂದ ಮುಚ್ಚಿ ಹೋಗಿವೆ. ಅಟ್ಲಾಂಟಾ ಮತ್ತು ನಾರ್ತ್ ಕೆರೊಲಿನಾದಲ್ಲಿ ವಾಹನ ಸವಾರರ ಪರದಾಟ ಹೇಳತೀರದು. ಕಾಕತಾಳೀಯವೆಂಬಂತೆ ಅಪಘಾತದ ದೃಶ್ಯ ಟಿವಿಯಲ್ಲಿ ನೇರಪ್ರಸಾರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...