alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ ಬಾಂಬ್ ಸ್ಪೋಟಿಸಿ 43 ಮಂದಿ ಸಾವು

syria-aa

ಬೈರೂತ್: ಸಿರಿಯಾದ ಅಜಾಜ್ ನಗರದಲ್ಲಿ ಜನನಿಬಿಡ ಪ್ರದೇಶದಲ್ಲಿಯೇ, ಶಕ್ತಿಶಾಲಿ ಕಾರ್ ಬಾಂಬ್ ಸ್ಪೋಟಿಸಿ, 43 ಮಂದಿ ಸಾವು ಕಂಡಿದ್ದಾರೆ.

ಟರ್ಕಿ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಅಜಾಜ್ ನಗರ ಬಂಡುಕೋರರ ವಶದಲ್ಲಿದ್ದು, ದುಷ್ಕರ್ಮಿಗಳು ಇಂತಹ ಕೃತ್ಯ ಎಸಗಿದ್ದಾರೆ.

ಬ್ರಿಟನ್ ನಲ್ಲಿ ನೆಲೆಯನ್ನು ಹೊಂದಿರುವ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯದ ವತಿಯಿಂದ ಈ ಕುರಿತು ಮಾಹಿತಿಯನ್ನು ನೀಡಲಾಗಿದೆ.

ಅಜಾಜ್ ಮಾರುಕಟ್ಟೆ ಪ್ರದೇಶದ ಇಸ್ಲಾಮಿಕ್ ಕೋರ್ಟ್ ಹೌಸ್ ಮುಂಭಾಗದಲ್ಲಿ ಕಾರ್ ಬಾಂಬ್ ಸ್ಪೋಟಿಸಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...