alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಂಡಿ ಕ್ರಶ್ ಹುಚ್ಚು ಹಿಡಿಸಿಕೊಂಡಿದ್ದ ಮಹಿಳೆ ಕಳೆದುಕೊಂಡಿದ್ದೇನು?

ಮೊಬೈಲ್ ಗೇಮ್ ಎಷ್ಟೋ ಜನರಿಗೆ ಹುಚ್ಚು ಹಿಡಿಸಿದೆ. ಅದನ್ನು ಕೇವಲ ಆಟದಂತೆ ಆಡದೇ ಚಟ ಮಾಡಿಕೊಂಡಿದ್ದಾರೆ ಹಲವರು. ಸಬ್ ವೇ ಸರ್ಫ್, ಟೆಂಪಲ್ ರನ್, ಪೋಕ್ಮನ್ ಗೋ ಹೀಗೆ ಒಂದಲ್ಲ ಎರಡಲ್ಲ. ವೆರೈಟಿ ವೆರೈಟಿ ಮೊಬೈಲ್ ಗೇಮ್ ಗಳು ಬಹಳ ಜನಪ್ರಿಯವಾಗಿವೆ.

ಕ್ಯಾಂಡಿ ಕ್ರಶ್ ಸಾಗಾ ಗೇಮನ್ನಂತೂ ಆಡದವರೇ ಇಲ್ಲ. 2012ರಲ್ಲಿ ಫೇಸ್ಬುಕ್ ಮೂಲಕ ಪರಿಚಯಿಸಲಾಗಿದ್ದ ಈ ಗೇಮ್ ಇವತ್ತಿಗೂ ಎಲ್ಲರ ಫೇವರಿಟ್. ಅತಿಯಾದ್ರೆ ಯಾವುದೂ ಒಳ್ಳೆಯದಲ್ಲ ಅನ್ನೋ ಮಾತೇ ಇದೆ. ಬ್ರಿಟನ್ ನ ಮಹಿಳೆಯೊಬ್ಬಳು ಇದಕ್ಕೆ ತಾಜಾ ಉದಾಹರಣೆ.

ಕ್ಯಾಂಡಿ ಕ್ರಶ್ ಗೇಮ್ ನ ಹುಚ್ಚು ಹಿಡಿಸಿಕೊಂಡಿದ್ದ ಆಕೆ ಸಾವಿರಾರು ಪೌಂಡ್ ಹಣ, ಉದ್ಯೋಗ ಮತ್ತು ಬಾಯ್ ಫ್ರೆಂಡ್ ಅನ್ನು ಕೂಡ ಕಳೆದುಕೊಂಡಿದ್ದಾಳೆ. ಅವಳ ಕ್ಯಾಂಡಿ ಕ್ರಶ್ ಹುಚ್ಚು ನೋಡಿ ಪ್ರಿಯಕರ ತೊರೆದು ಹೋಗಿದ್ದಾನೆ. ನತಾಶಾ ವೂಲ್ಸೆ ಎಂಬ ಈ ಮಹಿಳೆ ದಿನಕ್ಕೆ 18 ಗಂಟೆಗಳ ಕಾಲ ಕ್ಯಾಂಡಿ ಕ್ರಶ್ ಆಡುತ್ತಿದ್ಲು.

ಇದಕ್ಕಾಗಿ ಪ್ರತಿನಿತ್ಯ 5000 ಪೌಂಡ್ ಹಣ ಖರ್ಚು ಮಾಡುತ್ತಿದ್ಲು. ನಾಲ್ಕು ವರ್ಷಗಳ ಹಿಂದೆ ಶುರುವಾದ ಈ ಗೇಮ್ ಹುಚ್ಚು ಅವಳನ್ನು ಬಿಡಲೇ ಇಲ್ಲ. ಆಟದಲ್ಲಿ ಅದೆಷ್ಟು ತಲ್ಲೀನಳಾಗುತ್ತಿದ್ದಳೆಂದ್ರೆ ಮಗನನ್ನೂ ನಿರ್ಲಕ್ಷಿಸುತ್ತಿದ್ಲು. ಅವನನ್ನು ಶಾಲೆಯಿಂದ ಕರೆತರಲು ಮರೆಯುತ್ತಿದ್ಲು, ಮಗನಿಗೆ ಊಟ ತಿಂಡಿಯನ್ನೂ ಮಾಡಿ ಕೊಡುತ್ತಿರಲಿಲ್ಲ.

ಇದನ್ನೆಲ್ಲ ನೋಡಿ ಬೇಸತ್ತ ಆಕೆಯ ಪ್ರಿಯಕರ ಮನೆಬಿಟ್ಟು ಹೊರಟು ಹೋಗಿದ್ದಾನೆ. ಮಧ್ಯರಾತ್ರಿ ಎದ್ದು ಬಾತ್ ರೂಮಿನಲ್ಲಿ ಕುಳಿತು ಗಂಟೆಗಟ್ಟಲೆ ಕ್ಯಾಂಡಿ ಕ್ರಶ್ ಆಡುತ್ತಿದ್ಲು ನತಾಶಾ. ಕೆಲಸದ ವೇಳೆಯಲ್ಲೂ ಗೇಮ್ ಆಡುತ್ತಿದ್ದ ಇವಳನ್ನು ಗಮನಿಸಿದ ಮಾಲೀಕ, ಕೆಲಸಿದಂದ್ಲೇ ಕಿತ್ತು ಹಾಕಿದ್ದ. ಇಷ್ಟೆಲ್ಲಾ ಆದ ಮೇಲೆ ಥೆರಪಿಸ್ಟ್ ಒಬ್ಬರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದ ನತಾಶಾ ಕ್ಯಾಂಡಿ ಕ್ರಶ್ ಹವ್ಯಾಸವನ್ನು ಬಿಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...