alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಜೊತೆ ಔತಣಕೂಟದಲ್ಲಿ ನೀವೂ ಪಾಲ್ಗೊಳ್ಳಬಹುದು, ಆದ್ರೆ…

trump

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶ್ರೀಮಂತ ಅಭಿಮಾನಿಗಳಿಗೆ ಇದೊಂದು ಸದಾವಕಾಶ. ನೀವು ಟ್ರಂಪ್ ಜೊತೆಗೆ ಕೂತು ಕ್ಯಾಂಡಲ್ ಲೈಟ್ ಡಿನ್ನರ್ ಮಾಡ್ಬಹುದು. ಉಪಾಧ್ಯಕ್ಷ ಮೈಕ್ ಪೆನ್ಸ್ ಕೂಡ ಈ ಭೋಜನ ಕೂಟದಲ್ಲಿರ್ತಾರೆ.

ನಾವು ಮೊದಲೇ ಹೇಳಿದಂತೆ ಈ ಆಫರ್ ಸಿರಿವಂತರಿಗೆ ಮಾತ್ರ, ಯಾಕಂದ್ರೆ ಇದಕ್ಕೆ ಬರೋಬ್ಬರಿ 1 ಮಿಲಿಯನ್ ಡಾಲರ್ ಅಂದ್ರೆ 7 ಕೋಟಿ ರೂಪಾಯಿ ಖರ್ಚಾಗುತ್ತೆ. ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭವಿದೆ, ಈ ಖುಷಿಯಲ್ಲಿ ಪಾಲ್ಗೊಂಡು ಅಧ್ಯಕ್ಷರ ಜೊತೆ ಔತಣ ಮಾಡಲು ಉದ್ಯಮಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಟ್ರಂಪ್ ಮತ್ತವರ ಪತ್ನಿ ಮೆಲಾನಿಯಾ, ಮೈಕ್ ಪೆನ್ಸ್ ಮತ್ತವರ ಪತ್ನಿ ಕರೆನ್ ಜೊತೆಯಲ್ಲಿ ಕುಳಿತು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಲು 8 ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದೆ. 1 ಮಿಲಿಯನ್ ಡಾಲರ್ ಕೊಟ್ಟು ಇದನ್ನು ಕೊಂಡುಕೊಳ್ಳಬಹುದು. ಈ ಮೂಲಕ ಅಮೆರಿಕದ 58ನೇ ಅಧ್ಯಕ್ಷರ ಪ್ರಮಾಣವಚನ ಸಮಾರಂಭಕ್ಕೆ ಫಂಡ್ ಸಂಗ್ರಹಿಸಲಾಗ್ತಿದೆ. ಉಳಿದ ಹಣವನ್ನು ಚಾರಿಟಿಗಾಗಿ ವಿನಿಯೋಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕ್ಯಾಬಿನೆಟ್ ಗೆ ನೇಮಕವಾದವರ ಜೊತೆಗೆ ಭೋಜನದಲ್ಲಿ ಪಾಲ್ಗೊಳ್ಳಲು 100,000 ಡಾಲರ್ ನಿಗದಿಪಡಿಸಲಾಗಿದೆ. 2013 ರಲ್ಲಿ ಒಬಾಮಾ ಪದಗ್ರಹಣದ ವೇಳೆ ಇದೇ ರೀತಿ 44 ಮಿಲಿಯನ್ ಡಾಲರ್ ಹಣ ಸಂಗ್ರಹಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...