alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಬಳಕೆದಾರರಿಗೆ ಇಲ್ಲಿದೆ ಒಂದು ‘ಖುಷಿ ಸುದ್ದಿ’

ಸೆಲ್ ಫೋನ್ ಅಥವಾ ಮೊಬೈಲ್ ಗಳಿಂದ ಕ್ಯಾನ್ಸರ್ ಬರುತ್ತೆ ಅನ್ನೋ ವಿಚಾರ ಸಾಕಷ್ಟು ಚರ್ಚೆಯಾಗಿತ್ತು. ಸೆಲ್ ಫೋನ್ ನಿಂದ ಹೊರಸೂಸುವ ವಿಕಿರಣಗಳಿಂದ ಹಾರ್ಟ್ ಟ್ಯೂಮರ್ ಉಂಟಾಗುತ್ತದೆ ಅಂತಾ ಹೇಳಲಾಗಿತ್ತು. ನಿಜಕ್ಕೂ ಮೊಬೈಲ್ ಕ್ಯಾನ್ಸರ್ ಗೆ ಕಾರಣವಾಗುತ್ತಾ ಅನ್ನೋ ಪ್ರಶ್ನೆಗೆ ವಿಜ್ಞಾನಿಗಳು ಈಗ ಉತ್ತರ ಕಂಡುಹಿಡಿದಿದ್ದಾರೆ.

ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಬರುವ ಅಪಾಯವಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಹೆಣ್ಣು ಮತ್ತು ಗಂಡು ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಗಂಡು ಇಲಿಗಳಲ್ಲಿ ಅಸಹಜ ರೀತಿಯ ಹಾರ್ಟ್ ಟ್ಯೂಮರ್ ಕಂಡು ಬಂದಿತ್ತು. ಆದ್ರೆ ಹೆಣ್ಣು ಇಲಿಗಳಿಗೆ ಯಾವುದೇ ಅಪಾಯವಾಗಿರಲಿಲ್ಲ.

ಮೊಬೈಲ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್ ಬರುತ್ತದೆ ಅನ್ನೋದಕ್ಕೆ ಪುಷ್ಠಿ ನೀಡುವಂಥ ಯಾವುದೇ ಅಂಶಗಳು ಸಂಶೋಧನೆಯಲ್ಲಿ ಪತ್ತೆಯಾಗಿಲ್ಲ. ಸೆಲ್ ಫೋನ್ ಹಾಗೂ ಕ್ಯಾನ್ಸರ್ ನಡುವಣ ನಂಟು ತುಂಬಾ ದುರ್ಬಲವಾಗಿದೆ ಅಂತಾ ಅಮೆರಿಕದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಆದ್ರೂ ಫೋನ್ ಅನ್ನು ಕಿವಿಗಳ ಬಳಿ ಹಿಡಿದು ಮಾತನಾಡುವುದಕ್ಕಿಂತ ಇಯರ್ ಫೋನ್ ಬಳಸುವುದು ಉತ್ತಮ ಅಂತಾ ಸಲಹೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...