alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ ಕೆನಡಾ ಪ್ರಧಾನಿ

ju

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಟೊರೊಂಟೋದಲ್ಲಿರುವ BAPS ಶ್ರೀ ಸ್ವಾಮಿನಾರಾಯಣ ಮಂದಿರದ 10ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ರು. ವಿಶೇಷ ಅಂದ್ರೆ ಭಾರತದ ಸಾಂಪ್ರದಾಯಿಕ ಧಿರಿಸು ಕುರ್ತಾ ಪೈಜಾಮ ಧರಿಸಿ ಅವರು ಪೂಜೆ ಸಲ್ಲಿಸಿದ್ದಾರೆ.

justin

ನೀಲಿ ಬಣ್ಣದ ಕುರ್ತಾ ಮತ್ತು ಪೈಜಾಮ ಧರಿಸಿದ್ದ ಜಸ್ಟಿನ್, ಹೂಮಾಲೆಯನ್ನು ಕೊರಳಲ್ಲಿ ಹಾಕಿಕೊಂಡಿದ್ರು. ದೇವಾಲಯದ ವಿಧಿವಿಧಾನಗಳಂತೆ ವಿಶಿಷ್ಟ ಪೂಜೆಯಲ್ಲಿ ಪಾಲ್ಗೊಂಡಿದ್ರು. ಭಾರತದ ಮಾಜಿ ವಿದೇಶಾಂಗ ವಕ್ತಾರ ಹಾಗೂ ಕೆನಡಾದ ಹಾಲಿ ರಾಯಭಾರಿ ವಿಕಾಸ್ ಸ್ವರೂಪ್ ಕೂಡ ಪ್ರಧಾನಿ ಜಸ್ಟಿನ್ ಜೊತೆಗಿದ್ರು.

ಈ ದೇವಾಲಯ ವಾಸ್ತುಶಿಲ್ಪದ ಒಂದು ಮೇರುಕೃತಿ ಅಂತಾ ಜಸ್ಟಿನ್ ಬಣ್ಣಿಸಿದ್ದಾರೆ. ಕೋಮು ಸಾಮರಸ್ಯದ ಸ್ಥಳವಾಗಿ ಇದು ಮಾರ್ಪಟ್ಟಿದೆ ಅಂತಾ ಪ್ರಶಂಸಿಸಿದ್ದಾರೆ. ಬೋಚಸನ್ವಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಹಿಂದೂ ಸಂಘಟನೆ.

ಈ ಸಂಸ್ಥೆ 3,850 ಕೇಂದ್ರಗಳನ್ನು ಹೊಂದಿದೆ. ಜಗತ್ತಿನಾದ್ಯಂತ ತನ್ನ ವಿಶಿಷ್ಟ ಕಾರ್ಯಗಳಿಂದ ಗುರುತಿಸಿಕೊಂಡಿದೆ. ವಿಶ್ವಸಂಸ್ಥೆಯಿಂದ್ಲೂ ಪ್ರಶಂಸೆ ಗಿಟ್ಟಿಸಿಕೊಂಡಿರುವ BAPS ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...