alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾನ್ಯ ರೆಸ್ಟೋರೆಂಟ್ ನಲ್ಲಿ ಚಿಕನ್ ತಿಂದ ಕೆನಡಾ ಪಿಎಂ

ಕೆನಡಾ ಪ್ರಧಾನಿ ಜಸ್ಟಿಸ್ ಟ್ರುಡೂ ದೇಶದ ಎರಡನೇ ಯುವ ಪ್ರಧಾನಿಯಾಗಿದ್ದಾರೆ. ಜಸ್ಟಿಸ್ ಟ್ರುಡೂ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಚರ್ಚೆಯ ವಿಷ್ಯವಾಗಿದ್ದಾರೆ. ಜಸ್ಟಿಸ್ ಟ್ರುಡೂ ಉತ್ತಮ ವ್ಯಕ್ತಿತ್ವ ಜನರಿಗೆ ಇಷ್ಟವಾಗ್ತಿದೆ. ಪ್ರಧಾನಿಯಾದ್ರೂ ಸಾಮಾನ್ಯರಲ್ಲಿ ಒಬ್ಬರಾಗಿರುವ ಜಸ್ಟಿಸ್ ಟ್ರುಡೂ ವ್ಯಕ್ತಿತ್ವವನ್ನು ಫಿಲಿಫೈನ್ಸ್ ನಲ್ಲಿ ಕೂಡ ನೋಡಲು ಸಿಕ್ತು.

ಹಸಿದಿದ್ದ ಜಸ್ಟಿಸ್ ಟ್ರುಡೂ ಸ್ಥಳೀಯ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದಾರೆ. ಮೊದಲು ರಿಸೆಪ್ಶನ್ ಗೆ ಹೋದ ಜಸ್ಟಿಸ್ ಫ್ರೈಡ್ ಚಿಕನ್ ಇದ್ಯಾ ಎಂದು ಕೇಳಿದ್ದಾರೆ. ನಂತ್ರ ಫ್ರೈಡ್ ಚಿಕನ್ ಹಾಗೂ ಸ್ಟ್ರಾಬೆರಿ ಪ್ಲೇಟ್ ಆರ್ಡರ್ ಮಾಡಿದ್ದಾರೆ. ನಂತ್ರ ರೆಸ್ಟೋರೆಂಟ್ ನಲ್ಲಿದ್ದ ಜನರನ್ನು ಸಹಜವಾಗಿ ಮಾತನಾಡಿಸಿದ್ದಾರೆ. ಕೆಲವರ ಕೈ ಕುಲುಕಿದ್ರೆ ಮತ್ತೆ ಕೆಲವರನ್ನು ಅಪ್ಪಿಕೊಂಡಿದ್ದಾರೆ. ಅಲ್ಲಿದ್ದ ಜನರ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಚಿಕನ್ ಸಿದ್ಧವಾಗ್ತಿದ್ದಂತೆ ಅದನ್ನು ಪ್ಯಾಕ್ ಮಾಡಿಸಿದ್ದು, ಕಾರಿನಲ್ಲಿ ತಿನ್ನೋದಾಗಿ ಹೇಳಿದ್ದಾರೆ. ರೆಸ್ಟೋರೆಂಟ್ ನಲ್ಲಿ ಜಸ್ಟಿಸ್ ಇದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ರೆಸ್ಟೋರೆಂಟ್ ನಲ್ಲಿದ್ದ ಜನರು ಜಸ್ಟಿಸ್ ವ್ಯಕ್ತಿತ್ವವನ್ನು ಹಾಡಿ ಹೊಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...