alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾ ಏರ್ಪೋರ್ಟ್ ನಲ್ಲಿ ಕೆನಡಾ ಸಚಿವರಿಗೆ ಅವಮಾನ

ಸಿಖ್ ಪೇಟಾ ಧರಿಸಿದ್ದ ಕೆನಡಾ ಸಚಿವರನ್ನು ಅಮೆರಿಕಾದ ಏರ್ಪೋರ್ಟ್ ನಲ್ಲಿ ಅವಮಾನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆನಡಾದ ಕ್ಯಾಬಿನೆಟ್ ಸಚಿವ ನವದೀಪ್ ಬೈನ್ಸ್ ಅಮೆರಿಕಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಪ್ರಕ್ರಿಯೆ ವೇಳೆ, ಅವರು ಧರಿಸಿದ್ದ ಪೇಟಾ ತೆಗೆಯುವಂತೆ ಹೇಳಿ ಅಲ್ಲಿನ ಸಿಬ್ಬಂದಿ ಅವಮಾನಿಸಿದ್ದಾರೆ.

ಘಟನೆ ಸಂಬಂಧ ಅಮೆರಿಕಾ ನಂತರ ಕ್ಷಮೆ ಯಾಚಿಸಿತ್ತು. ಕಳೆದ ವರ್ಷ ಏಪ್ರಿಲ್ 2017 ರಂದು ಈ ಘಟನೆ ನಡೆದಿದ್ರೂ, ಈಗ ಈ ಘಟನೆ ಬೆಳಕಿಗೆ ಬರಲು ಕಾರಣ ಸಚಿವ ನವದೀಪ್ ಬೈನ್ಸ್ ಫ್ರಾನ್ಸ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನ.

ಸಿಖ್ ಸಮುದಾಯದವರಾದ ನವದೀಪ್, ಮಿಚಿಗನ್ ಗವರ್ನರ್ ರನ್ನು ಭೇಟಿಯಾಗಿ ಬರುವಾಗ ಡೆಟ್ರಾಯಿಟ್ ವಿಮಾನ ನಿಲ್ದಾಣದಲ್ಲಿ ಅವರನ್ನ ತಪಾಸಣೆಗೊಳಪಡಿಸಲಾಗಿತ್ತು. ಅಲ್ಲದೆ ಪೇಟಾ ತೆಗೆಯುವಂತೆ ಅಲ್ಲಿನ ಸಿಬ್ಬಂದಿ ಒತ್ತಾಯಿಸಿದ್ರು. ಆದ್ರೆ ಇದನ್ನ ಅವರು ನಿರಾಕರಿಸಿದಾಗ, ಸ್ಕ್ರೀನಿಂಗ್ ಗೆ ಒಳಪಡಿಸಲಾಗಿತ್ತು. ಈ ವೇಳೆ ಅವರು ರಾಜತಾಂತ್ರಿಕ ಪಾಸ್ ಪೋರ್ಟ್ ತೋರಿಸಿದ್ದು, ಬಳಿಕ ಒಳಗೆ ಹೋಗಲು ಅನುಮತಿ ನೀಡಿದ್ರು ಅಂತಾ ತಮ್ಮ ಸಂದರ್ಶನದಲ್ಲಿ ಬೈನ್ಸ್ ಹೇಳಿಕೊಂಡಿದ್ದಾರೆ. ಘಟನೆ ಕುರಿತು ಅಮೆರಿಕಾದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಅವರು ಕೂಡಾ ವಿಷಾದ ವ್ಯಕ್ತಪಡಿಸಿ ತಮ್ಮ ಕ್ಷಮೆ ಯಾಚಿಸಿದ್ರು ಎಂದು ನವದೀಪ್ ಬೈನ್ಸ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...