alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂಟರಗಾಳಿಗೂ ಬೆದರಲಿಲ್ಲ ಛಲದಂಕ ಮಲ್ಲ

storm

ಕೆನಡಾದಲ್ಲಿ ವ್ಯಕ್ತಿಯೊಬ್ಬ ಬಿರುಗಾಳಿಗೇ ಸೆಡ್ಡು ಹೊಡೆದಿದ್ದಾನೆ. ಬೆನ್ನ ಹಿಂದೆ ಶರವೇಗದಲ್ಲಿ ಗಾಳಿ ನುಗ್ಗಿ ಬರ್ತಾ ಇದ್ರೂ ಆತ ಸ್ವಲ್ಪವೂ ಭಯಪಡದೆ ಆರಾಮಾಗಿ ಲಾನ್ ನಲ್ಲಿ ಓಡಾಡುತ್ತಿದ್ದ. ಈ ದೃಶ್ಯವನ್ನು ಆತನ ಪತ್ನಿ ಸಿಸಿಲಿಯಾ ವೆಸೆಲ್ಸ್ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾಳೆ.

ಥೆಯುನಿಸ್ ಎಂಬಾತ ಆಲ್ಬರ್ಟಾದಲ್ಲಿರೋ ತನ್ನ ಮನೆ ಎದುರಿನ ಲಾನ್ ನಲ್ಲಿ ಹುಲ್ಲನ್ನು ಕತ್ತರಿಸ್ತಾ ಇದ್ದ. ಪತ್ನಿ ಒಂದು ಸಣ್ಣ ನಿದ್ದೆ ಮಾಡೋಣ ಅಂದ್ಕೊಂಡು ಮಲಗಿದ್ಲು. ಅಷ್ಟೊತ್ತಿಗೆ ಅವರ ಮಗಳು ಭರ್ರನೆ ಬೀಸಲಾರಂಭಿಸಿದ್ದ ಗಾಳಿ ನೋಡಿ ಭಯಪಟ್ಟಿದ್ದಾಳೆ.

ಅಪ್ಪ ಇನ್ನೂ ಮನೆಯೊಳಕ್ಕೆ ಬಂದಿಲ್ಲ ಅಂತಾ ತಾಯಿಯನ್ನು ಎಬ್ಬಿಸಿದ್ದಾಳೆ. ಕೂಡಲೇ ಹೊರಬಂದ ಸಿಸಿಲಿಯಾ ಬಿರುಗಾಳಿ ಬೀಸ್ತಾ ಇದ್ದು, ಒಳಕ್ಕೆ ಬರುವಂತೆ ಪತಿಯನ್ನು ಕರೆದಿದ್ದಾಳೆ. ಆದ್ರೆ ಆತ ಮಾಡ್ತಾ ಇದ್ದ ಕೆಲಸ ಬಿಟ್ಟು ಬರಲು ಒಪ್ಪಿಲ್ಲ. ಜೋರಾಗಿ ಬೀಸ್ತಾ ಇದ್ದ ಸುಂಟರಗಾಳಿಯ ಮೇಲೆ ಗಮನ ಇಟ್ಟು ತನ್ನ ಕೆಲಸ ಮುಂದುವರಿಸಿದ್ದ. ಅದೃಷ್ಟವಶಾತ್ ಥೆಯುನಿಸ್ ಗೆ ಯಾವುದೇ ಅಪಾಯವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...