alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಳಿಯೂ ಮಾರಾಟದ ಸರಕಾಯ್ತು

air canadaಗಾಳಿಯನ್ನೂ ಮಾರಾಟ ಮಾಡಲಾಗುತ್ತಿದೆ. ಹೌದು, ದೇಶದಲ್ಲಿ ಶುದ್ಧಗಾಳಿಯನ್ನು 12.50 ರೂ. ದರದಲ್ಲಿ ಮಾರಾಟ ಮಾಡಲು ಕೆನಡಾ ಮೂಲದ ಕಂಪನಿಯೊಂದು ಮುಂದಾಗಿದ್ದು, ಆ ಮೂಲಕ ಗಾಳಿಯನ್ನೂ ಕೂಡ ದುಡ್ಡು ಕೊಟ್ಟು ಖರೀದಿಸುವ ಸ್ಥಿತಿ ಬಂದಿದೆ.

ಅತಿಹೆಚ್ಚಿನ ವಾಹನ, ಕೈಗಾರಿಕೆಗಳಿಂದ ದೇಶದ ಹಲವಾರು ನಗರಗಳಲ್ಲಿ ವಾತಾವರಣ ಕಲುಷಿತಗೊಂಡಿದ್ದು, ಶುದ್ಧ ಗಾಳಿಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೆನಡಾ ಮೂಲದ ಕಂಪನಿ ಶುದ್ಧಗಾಳಿ ಮಾರಾಟಕ್ಕೆ ಮುಂದಾಗಿದ್ದು, 3 ಲೀಟರ್ ಮತ್ತು 5 ಲೀಟರ್ ಕ್ಯಾನ್ ಗಳಲ್ಲಿ ಶುದ್ಧಗಾಳಿ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಶುದ್ಧಗಾಳಿ ಇರುವ ಕ್ಯಾನ್ ಗಳನ್ನು ಭಾರತಕ್ಕೆ ಬಿಡುಗಡೆ ಮಾಡಲಾಗಿದೆ. ಪರಿಸರ ಮಾಲಿನ್ಯ ಹೆಚ್ಚಿರುವ ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಇತ್ತೀಚೆಗೆ ಚೀನಾದಲ್ಲಿ ವಾತಾವರಣ ಕಲುಷಿತಗೊಂಡು ಜನರಿಗೆ ಶುದ್ಧಗಾಳಿ ಸಿಗದೇ ತೊಂದರೆಯಾಗಿತ್ತು. ಆಗ ಇದೇ ಕೆನಡಾ ಕಂಪನಿ ಶುದ್ಧಗಾಳಿಯನ್ನು ಮಾರಾಟ ಮಾಡಿತ್ತು. ಚೀನಾದ ಬೀಜಿಂಗ್, ಶಾಂಘೈ ಸೇರಿದಂತೆ ವಿವಿಧ ಕಡೆಗಳಲ್ಲಿ ಗಾಳಿ ಕ್ಯಾನ್ ಮಾರಲಾಗುತ್ತಿದೆ.

ಕೆನಡಾದ ಪರ್ವತ ಪ್ರದೇಶಗಳಿಂದ ಈ ಶುದ್ಧಗಾಳಿಯನ್ನು ಕ್ಯಾನ್ ಗಳಿಗೆ ತುಂಬಿಸಲಾಗುತ್ತದೆ ಎಂದು ಹೇಳಿರುವ ಕಂಪನಿ, ಅದರ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಭಾರತದಲ್ಲಿ ಮಾರುಕಟ್ಟೆ ವೃದ್ಧಿಸುವ ವಿಶ್ವಾಸವಿದೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...