alex Certify
ಕನ್ನಡ ದುನಿಯಾ       Mobile App
       

Kannada Duniya

ಅರೆನಗ್ನ ‘ನೃತ್ಯ’ ಮಾಡಿ ಸಿಕ್ಕಿಬಿದ್ದ ಪ್ರವಾಸಿಗರು

ಅಶ್ಲೀಲವಾಗಿ ಹಾಡುತ್ತ ನೃತ್ಯ ಮಾಡಿದ ಆರೋಪದ ಮೇಲೆ ಕಾಂಬೋಡಿಯಾದಲ್ಲಿ 10 ಪ್ರವಾಸಿಗರನ್ನು ಬಂಧಿಸಲಾಗಿದೆ. ಕಾಂಬೋಡಿಯಾದ ಸೀಮ್ ರೀಪ್ ಎಂಬಲ್ಲಿ ವಿಲ್ಲಾ ಒಂದರಲ್ಲಿ ತಂಗಿದ್ದ ಈ ಪ್ರವಾಸಿಗರನ್ನು ಅರೆಸ್ಟ್ ಮಾಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ಬಂಧಿತ 10 ಜನರಲ್ಲಿ ಐವರು ಪ್ರವಾಸಿಗರು ಬ್ರಿಟನ್ ಮೂಲದವರು. ಇಬ್ಬರು ಕೆನಡಾದವರು ಹಾಗೂ ಓರ್ವ ನ್ಯೂಜಿಲೆಂಡ್ ಪ್ರಜೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರವಾಸಕ್ಕೆ ಅಂತಾ ಬಂದಿದ್ದ ಇವರು ಭರ್ಜರಿ ಪಾರ್ಟಿ ಮಾಡಿದ್ದಾರೆ. ಅಲ್ಲಿ ಪೋರ್ನ್ ಹಾಡುಗಳನ್ನು ಹೇಳುತ್ತ ಅಶ್ಲೀಲವಾಗಿ ನರ್ತಿಸಿದ್ದಾರೆ.

ಇದು ಕಾಂಬೋಡಿಯಾದ ಸಂಸ್ಕೃತಿಗೆ ವಿರುದ್ಧವಾಗಿರೋದ್ರಿಂದ ಅವರನ್ನು ಬಂಧಿಸಿರೋಗಾಗಿ ಪೊಲೀಸರು ಹೇಳಿದ್ದಾರೆ. ಬಂಧಿತರಿಗೆ 1 ವರ್ಷ ಜೈಲುಶಿಕ್ಷೆಯಾಗುವ ಸಾಧ್ಯತೆಯೂ ಇದೆ. ಇನ್ನೊಂದೆಡೆ ಬಂಧಿತ ಐವರು ಪ್ರವಾಸಿಗರ  ಬಿಡುಗಡೆಗಾಗಿ ಬ್ರಿಟನ್ ಸರ್ಕಾರ ಮನವಿ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...