alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅವಳಿಗಳು ಜನಿಸಿದ್ದು ಬೇರೆ ಬೇರೆ ವರ್ಷದಲ್ಲಿ, ಹೇಗೆ ಗೊತ್ತಾ…?

ಒಟ್ಟಿಗೆ ಜನಿಸಿದ್ರೆ ಅವರನ್ನು ಅವಳಿಗಳು ಅಂತಾ ಕರೆಯಲಾಗುತ್ತದೆ. ಅವರ ಮಧ್ಯೆ ಕೆಲವೇ ಸೆಕೆಂಡ್ ಅಥವಾ ಕೆಲವೇ ನಿಮಿಷಗಳ ಅಂತರ ಇರುವುದು ಸಾಮಾನ್ಯ. ಆದ್ರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅವಳಿಗಳು ಬೇರೆ ಬೇರೆ ವರ್ಷದಲ್ಲಿ ಜನಿಸಿದ್ದಾರೆ.

ಆದ್ರೆ ಅವಳಿಗಳ ಮಧ್ಯೆ ಇರುವ ಅಂತರ ಮಾತ್ರ ಕೆಲವೇ ನಿಮಿಷಗಳು ಮಾತ್ರ. ಅದ್ಹೇಗೆ ಅಂತೀರಾ? 2017ರ ಡಿಸೆಂಬರ್ 31ರಂದು ರಾತ್ರಿ 11.38ಕ್ಕೆ ಒಂದು ಮಗು ಜನಿಸಿದೆ. ಇನ್ನೊಂದು ಮಗುವಿನ ಜನನ 18 ನಿಮಿಷಗಳ ನಂತರ ಆಗಿದೆ. ಅಂದ್ರೆ 2018 ರ ಜನವರಿ 1ರಂದು 12.16ಕ್ಕೆ.

ಹಾಗಾಗಿ ಅವಳಿಗಳಾದ್ರೂ ಇವರ ಹುಟ್ಟಿದ ವರ್ಷ ಮಾತ್ರ ಬೇರೆ ಬೇರೆ. ಈ ಗಂಡು ಮತ್ತು ಹೆಣ್ಣು ಮಗುವಿಗೆ ಜೋಕ್ವಿನ್ ಹಾಗೂ ಐಟಾನಾ ಎಂದು ಹೆಸರಿಡಲಾಗಿದೆ. ಜನವರಿ 27ರಂದು ಮಹಿಳೆಗೆ ಹೆರಿಗೆ ದಿನಾಂಕ ನಿಗದಿಯಾಗಿತ್ತು.

ಆದ್ರೆ ಕೊಂಚ ಸಮಸ್ಯೆ ಕಾಣಿಸಿದ್ದರಿಂದ ಜನವರಿ 10ರಂದು ಸಿಸೇರಿಯನ್ ಮಾಡಲು ನಿರ್ಧರಿಸಲಾಗಿತ್ತು. ಹೊಸ ವರ್ಷದಂದೇ ಆಕೆಗೆ ಹೆರಿಗೆ ನೋವು ಶುರುವಾಗಿದ್ದರಿಂದ ಬೇಗನೆ ಅವಳಿಗಳ ಜನನವಾಗಿದೆ. ಅವಳಿಗಳು ಈ ರೀತಿ ಬೇರೆ ಬೇರೆ ವರ್ಷದಲ್ಲಿ ಹುಟ್ಟಿರೋದನ್ನು ಈವರೆಗೂ ನೋಡಿರಲಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...