alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ನಾಯಿಯೇ ಮೇಯರ್..!!! ಅದಕ್ಕೆ ಇನ್ನೆರಡು ನಾಯಿಗಳ ಸಾಥ್

ರಾಜಕಾರಣದಲ್ಲಿ ನಿಯತ್ತಿಲ್ಲ, ಹಾಗಂತ ನಿಯತ್ತಿಗೆ ಹೆಸರಾಗಿರುವ ನಾಯಿಗೆ ಅಧಿಕಾರ ನೀಡೋಕಾಗುತ್ತಾ? ಖಂಡಿತ ಆಗಲ್ಲ. ಆದರೂ ಇಲ್ಲೊಂದಿಷ್ಟು ಮಂದಿ ನಾಯಿಯನ್ನೇ ಮೇಯರ್ ಅಗಿಸಿ ಅಚ್ಚರಿ ಮೂಡಿಸಿದ್ದಾರೆ. ಹೀಗೆ ಮೇಯರ್ ಆಗಿರುವ ನಾಯಿಯ ಹೆಸರು ಮ್ಯಾಕ್ಸ್ ಮುಯೆಲ್ಲರ್-2. ಹೀಗೆ ನಾಯಿಯನ್ನು ಮೇಯರ್ ಆಗಿ ಹೊಂದಿರುವ ನಗರ ಕ್ಯಾಲಿಫೋರ್ನಿಯಾದ ಐಡಿಲ್‍ವೈಲ್ಡ್.

“ನಾಯಿಯೂ ಮೇಯರ್ರಾ?” ಎಂದು ದಿಗ್ಭ್ರಾಂತರಾಗಬೇಡಿ. ಐಡಿಲ್‍ವೈಲ್ಡ್ ಸಂಘಟಿತ ನಗರವಲ್ಲವಾದ್ದರಿಂದ ಇಲ್ಲಿ ಕಾನೂನು ಪ್ರಕಾರ ಮೇಯರ್ ಆಯ್ಕೆ ನಡೆಯುವುದಿಲ್ಲ. ಆದರೂ ಇಲ್ಲಿನ ಪ್ರಾಣಿಪ್ರಿಯ ನಿವಾಸಿಗರು ಪ್ರಾಣಿಗಳ ಮಧ್ಯೆ ಚುನಾವಣೆ ನಡೆಸಿ ಅವುಗಳಲ್ಲೇ ಒಂದನ್ನು ಮೇಯರ್ ಆಗಿ ಆರಿಸಿದ್ದಾರೆ.

ಅಂದ ಹಾಗೆ 2012ರಲ್ಲೂ ಇದೇ ತರ ಚುನಾವಣೆ ನಡೆದಿದ್ದು ಮ್ಯಾಕ್ಸ್-1 ಮೇಯರ್ ಆಗಿತ್ತು. ಇದೀಗ ಅದರ ಉತ್ತರಾಧಿಕಾರಿಯಾಗಿ ಮ್ಯಾಕ್ಸ್-2 ಮೇಯರ್ ಆಗಿದೆ. ವಿಶೇಷ ಎಂದರೆ ಗೋಲ್ಡನ್ ರಿಟ್ರೀವರ್ ತಳಿಯ ಈ ನಾಯಿಗೆ ಅಸಿಸ್ಟೆಂಟ್ ಆಗಿ ಇನ್ನೆರಡು ನಾಯಿಗಳನ್ನು ಆರಿಸಲಾಗಿದೆ. ಅವುಗಳೇ ಉಪಮೇಯರ್ ಮಿಕಿ ಮತ್ತು ಮಿಟ್ಜಿ.

ಈ ಡಾಗ್ ಮೇಯರ್‍ಗಳಿಗೆ ಟೈ ಕಟ್ಟಿ ಪ್ರತ್ಯೇಕ ಕಾರಿನಲ್ಲಿ ಓಡಾಡಿಸಲಾಗುತ್ತದೆ. ನಗರದ ಜನರತ್ತ ಅನ್‍ಕಂಡಿಷನಲ್ ಲವ್ ವ್ಯಕ್ತಪಡಿಸುವುದೇ ಈ ಡಾಗ್ ಮೇಯರ್‍ಗಳ ಕೆಲಸವಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...