alex Certify
ಕನ್ನಡ ದುನಿಯಾ       Mobile App
       

Kannada Duniya

ಆತನ ಕಾರಿನಲ್ಲಿತ್ತು 362 ಕೆಜಿಯಷ್ಟು ಕದ್ದ ಮಾಲು….ಕದ್ದಿದ್ದು ಏನು ಗೊತ್ತಾ?

ಕ್ಯಾಲಿಫೋರ್ನಿಯಾ: 62 ವರ್ಷದ ವ್ಯಕ್ತಿಯೋರ್ವ ಬರೋಬ್ಬರಿ 362 ಕೆಜಿ ಲಿಂಬೆ ಹಣ್ಣು ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಕ್ಯಾಲಿಫೋರ್ನಿಯಾದ ಡಿಯೋನ್ಸಿಯೊ ಫಿರೋಸ್ ಲಿಂಬೆ ಹಣ್ಣು ಕದ್ದು ಸಿಕ್ಕಿಬಿದ್ದವನು.

ತನ್ನ ಕಾರಿನಲ್ಲಿ ಲಿಂಬೆ ಹಣ್ಣನ್ನು ತುಂಬಿಸಿಕೊಂಡು ಸಾಗುತ್ತಿದ್ದ ಡಿಯೋನ್ಸಿಯೋನನ್ನು ಪೊಲೀಸರು ತಪಾಸಣೆಗಾಗಿ ನಿಲ್ಲಿಸಿದ್ದಾರೆ. ಈ ವೇಳೆ ಲಿಂಬೆ ಹಣ್ಣು ಇರುವುದನ್ನು ಕಂಡು ವಿಚಾರಣೆ ನಡೆಸಿದಾಗ, ಕದ್ದ ಮಾಲು ಎಂಬುದು ಗೊತ್ತಾಗಿದೆ. ಕಳ್ಳತನದ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ಈತ ಲಿಂಬೆ ಹಣ್ಣು ಕದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಟ್ವಿಟರ್‌ನಲ್ಲಿ ಜೋಕುಗಳ ಸರಮಾಲೆಯೇ ಹರಿದಿದೆ.

ಹತ್ತಿರವಿದ್ದ ಲಿಂಬೆ ಹಣ್ಣಿನ ತೋಟದಿಂದ ತಾನು ಇದನ್ನು ಕದ್ದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನವರಿಯಲ್ಲಿ ಸ್ಪೇನ್‌ನ ವ್ಯಕ್ತಿಯೋರ್ವ ಕಾರಿನಲ್ಲಿ 4 ಸಾವಿರ ಕೆಜಿ ಕಿತ್ತಳೆ ಹಣ್ಣನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದ. ವಿಚಾರಣೆ ವೇಳೆ, ದೂರದ ಊರಿಗೆ ಸಾಗುವ ವೇಳೆ ಮಾರ್ಗ ಮಧ್ಯೆ ತಿನ್ನಲು ಬೇಕಾಗುತ್ತದೆಂದು ದಾರಿಯುದ್ದಕ್ಕೂ ಇದ್ದ ಕಿತ್ತಳೆ ತೋಟದಿಂದ ಹಣ್ಣ ಕಿತ್ತುಕೊಂಡಿರುವುದಾಗಿ ಹೇಳಿಕೆ ನೀಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...