alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಡ್ಬರಿ ಬಾಕ್ಸ್ ನೋಡಿ ಬೇಸ್ತು ಬಿದ್ದವನ ಕಥೆಯಿದು….

ಕ್ರಿಸ್ ಮಸ್ ದಿನದಂದು ಗಿಫ್ಟ್ ಆಗಿ ಬಂದಿದ್ದ ಕ್ಯಾಡ್ಬರಿ ಬಿಸ್ಕೇಟ್ ಬಾಕ್ಸ್ ಗಾತ್ರ ಹಾಗೂ ಅದರ ಸುಂದರ ಪ್ಯಾಕಿಂಗ್ ನೋಡಿ ಭಾರೀ ನಿರೀಕ್ಷೆಯಿಂದ ಓಪನ್ ಮಾಡಿದವನೊಬ್ಬ ಅದರಲ್ಲಿದ್ದದ್ದನ್ನು ನೋಡಿ ಬೇಸ್ತು ಬಿದ್ದಿದ್ದಾನೆ. ಅಷ್ಟೇ ಅಲ್ಲ ಇದರಿಂದ ಆಕ್ರೋಶಗೊಂಡು ತನ್ನ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

ತನ್ನ ಹೆಸರನ್ನು ಹೇಳಿಕೊಳ್ಳಲಿಚ್ಚಿಸದ ಬರ್ಮಿಂಗ್ ಹ್ಯಾಂ ಮೂಲದ ಈ ವ್ಯಕ್ತಿಯ ಪತ್ನಿ ಶಾಲಾ ಶಿಕ್ಷಕಿಯಂತೆ. ಕ್ರಿಸ್ ಮಸ್ ಸಂದರ್ಭದಲ್ಲಿ ಆಕೆಗೆ ವಿದ್ಯಾರ್ಥಿಯೊಬ್ಬನ ಪೋಷಕರು ಕ್ಯಾಡ್ಬರಿ ಬಿಸ್ಕೇಟ್ ಬಾಕ್ಸ್ ಗಿಫ್ಟ್ ಆಗಿ ನೀಡಿದ್ದು, ಆದರೆ ಇವರುಗಳು ಕ್ರಿಸ್ ಮಸ್ ದಿನದಂದು ಓಪನ್ ಮಾಡಲಿಲ್ಲವಂತೆ.

ಕೆಲ ದಿನಗಳ ಬಳಿಕ ರೆಡ್ ವೈನ್ ಇಟ್ಟುಕೊಂಡು ಈ ಬಾಕ್ಸ್ ಓಪನ್ ಮಾಡಿ ಬಳಿಕ ಪೆಚ್ಚಾಗಿದ್ದಾನೆ ಈ ವ್ಯಕ್ತಿ. ಬಾಕ್ಸ್ ಒಳಗೆ ಎಂಟು ಬಿಸ್ಕೇಟ್ ಗಳಿದ್ದವೆನ್ನಲಾಗಿದ್ದು, ಇದು ವ್ಯಕ್ತಿಯ ಆಕ್ರೋಶಕ್ಕೆ ಕಾರಣವಾಗಿದೆ. ಬಾಕ್ಸ್ ಗಾತ್ರ ಹಾಗೂ ಸುಂದರ ಪ್ಯಾಕ್ ನೋಡಿ ಭಾರೀ ನಿರೀಕ್ಷೆಯಿಂದ ಓಪನ್ ಮಾಡಿದ ನನಗೆ ನಿರಾಸೆಯಾಯಿತು ಎಂದಿರುವ ಆತ, ಆಕರ್ಷಕ ಪ್ಯಾಕಿಂಗ್ ಮಾಡುವ ಮೂಲಕ ಕಂಪನಿ ಗ್ರಾಹಕರಿಗೆ ವಂಚಿಸುತ್ತಿದೆ ಎಂದು ಆರೋಪಿಸಿದ್ದಾನೆ.

ಈತನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಇನ್ನೂ ಆನೇಕರು ತಮಗೆ ಗಿಫ್ಟ್ ಆಗಿ ಬಂದಿದ್ದ ಕ್ಯಾಡ್ಬರಿ ಕಂಪನಿಯ ಉತ್ಪನ್ನಗಳ ಫೋಟೋ ಸಮೇತ ಪೋಸ್ಟ್ ಮಾಡಿದ್ದು, ತಮಗೂ ಇಂತದ್ದೇ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಇದೆಲ್ಲ ಆರೋಪಕ್ಕೂ ಸ್ಪಷ್ಟನೆ ನೀಡಿರುವ ಕ್ಯಾಡ್ಬರಿ ಕಂಪನಿ ವಕ್ತಾರರು, ಉತ್ಪನ್ನದ ಪ್ಯಾಕ್ ಮೇಲೆಯೇ ಅದರ ಸಂಪೂರ್ಣ ವಿವರ ಬರೆದಿರುತ್ತೇವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...