alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗುತ್ತದೆ ಎಂಬ ಮಾತಿಗೆ ಇದೇ ಉದಾಹರಣೆ…!

ಗ್ರಹಚಾರ ಕೆಟ್ಟರೆ ಹಗ್ಗವೂ ಹಾವಾಗುತ್ತದೆ ಎಂಬ ಮಾತಿದೆ. ಇದಕ್ಕೆ ಚೀನಾದಲ್ಲಿ ನಡೆದಿರುವ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್.

ಪೂರ್ವ ಚೀನಾದ ಝಿಬು ನಗರದಲ್ಲಿ ಈ ಘಟನೆ ನಡೆದಿದ್ದು, ಟೆಂಪೋ ಚಾಲಕನೊಬ್ಬ ತನ್ನ ವಾಹನವನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಕಾರೊಂದು ಅಡ್ಡ ಬಂದಿದೆ.

ಟೆಂಪೋ ಚಾಲಕ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಟೆಂಪೊ ಉರುಳಿ ಬಿದ್ದಿದ್ದು, ಅದರಡಿ ಚಾಲಕ ಸಿಲುಕಿಕೊಂಡಿದ್ದಾನೆ. ಕೂಡಲೇ ಧಾವಿಸಿ ಬಂದ ಸ್ಥಳೀಯರು ಟೆಂಪೋವನ್ನು ಎತ್ತಿ ನಿಲ್ಲಿಸಲು ಯಶಸ್ವಿಯಾಗಿದ್ದಾರೆ.

ಆದರೆ ಗ್ರಹಚಾರ ನೋಡಿ. ಚಾಲನಾ ಸ್ಥಿತಿಯಲ್ಲಿಯೇ ಇದ್ದ ಟೆಂಪೋ ಎತ್ತಿ ನಿಲ್ಲಿಸುತ್ತಿದ್ದಂತೆ ಮುಂದೆ ಓಡಲು ಶುರು ಮಾಡಿದೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಗಾಯಗೊಂಡಿದ್ದ ಚಾಲಕ ಸುಧಾರಿಸಿಕೊಳ್ಳಲು ಇನ್ನೂ ಯತ್ನಿಸುತ್ತಿರುವಾಗಲೇ ಸುತ್ತು ಹೊಡೆದುಕೊಂಡು ಬಂದ ಟೆಂಪೋ ಮತ್ತೊಮ್ಮೆ ಆತನಿಗೆ ಡಿಕ್ಕಿ ಹೊಡೆದಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...