alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ಜೋರಾಗಿದೆ ಈ ಅಕ್ರಮ ದಂಧೆ

ಕೆಲ ಖಾಸಗಿ ಫೇಸ್ಬುಕ್ ಗ್ರೂಪ್ ಗಳಲ್ಲಿ ಅಕ್ರಮ ದಂಧೆಯೇ ಶುರುವಾಗಿದೆ. ಮನೆ ಕೆಲಸದವರ ಮಾರಾಟ ಮತ್ತು ಖರೀದಿಗೆ ಫೇಸ್ಬುಕ್ ಅನ್ನು ಬಳಸಿಕೊಳ್ಳಲಾಗ್ತಿದೆ. ಸೌದಿ ಅರೇಬಿಯಾದಲ್ಲಿ ಕಳೆದ ಕೆಲ ದಿನಗಳಿಂದ ಈ ಟ್ರೆಂಡ್ ಶುರುವಾಗಿದೆ. ತಮ್ಮ ಅಗತ್ಯವನ್ನು ದಾಖಲಿಸಿ, ಯಾವಾಗ ಕೆಲಸದವರ ಅಗತ್ಯವಿದೆ ಅನ್ನೋದನ್ನು ನಮೂದಿಸಿ, ಜನರು ಫೇಸ್ಬುಕ್ ನಲ್ಲೇ ವಹಿವಾಟು ಶುರು ಮಾಡಿದ್ದಾರೆ.

ಗಲ್ಫ್ ರಾಷ್ಟ್ರಗಳು ಕಫಾಲಾ ಅನ್ನೋ ವಿಶಿಷ್ಟ ವೀಸಾ ನೀಡುತ್ತವೆ. ಈ ವೀಸಾ ಪಡೆದವರೆಲ್ಲ ಸಾಮಾನ್ಯವಾಗಿ ಲಿವ್ ಇನ್ ಮೇಡ್ ಆಗಿ ಕೆಲಸ ಮಾಡ್ತಾರೆ. ಅಧಿಕೃತ ನೇಮಕಾತಿ ಏಜೆನ್ಸಿಗಳ ಮೂಲಕ ಈ ಪ್ರಕ್ರಿಯೆ ನಡೆಯುತ್ತದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲೇ ಮನೆಕೆಲಸದವರ ಮಾರಾಟ, ಖರೀದಿ ದಂಧೆ ಜೋರಾಗಿದೆ.

ನೇಮಕಾತಿ ಏಜೆನ್ಸಿಗಳ ಮೊರೆ ಹೋಗೋದು ತುಂಬಾ ದುಬಾರಿ. ಹಾಗಾಗಿ ಜಾಲತಾಣಗಳೇ ಬೆಸ್ಟ್ ಅಂತಾ ಜನರು ಕೂಡ ನಿರ್ಧರಿಸಿದ್ದಾರೆ. ಈ ಬಗ್ಗೆ ಸೌದಿ ಅರೇಬಿಯಾ ಪೊಲೀಸರು ತನಿಖೆ ಕೂಡ ಆರಂಭಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...