alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಜೊತೆಗಿನ ಕ್ರಿಕೆಟ್ ಕದನದ ವೇಳೆ ಎಲ್ಲರ ಮನ ಗೆದ್ದಿದ್ದಾಳೆ ಈಕೆ…!

ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಯುದ್ಧ ನಡೆಯುತ್ತಿರಬೇಕಾದರೆ ಸೆಂಚುರಿ ಬಾರಿಸಿದವರಿಗಿಂತ ಸುದ್ದಿಯಾದವಳು ಈ ಸುಂದರಿ. ಸ್ಟೇಡಿಂಯನಲ್ಲಿ ಪಾಕಿಸ್ತಾನದ ಜರ್ಸಿ ಧರಿಸಿ ನಿಂತ ಯುವತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೋ ಚರ್ಚೆ. ಆಕೆಯ ಚಿತ್ರಗಳು ಓಡಿದ್ದೇ ಓಡಿದ್ದು. ಸದ್ಯಕ್ಕೆ ಭಾರತೀಯರ ಹೊಚ್ಚ ಹೊಸ ಕ್ರಷ್ ಇವಳು.

ಕೆಲವು ಭಾರತೀಯರಂತೂ ಭವಿಷ್ಯದಲ್ಲಿ ಪಾಕಿಸ್ತಾನದ ಜೊತೆಗೆ ಇನ್ನಷ್ಟು ಕ್ರಿಕೆಟ್ ಪಂದ್ಯ ಏರ್ಪಡಿಸಿ ಎಂದು ಮನವಿಯನ್ನೂ ಮಾಡಿದ್ದಾರೆ, ಕಾರಣ ಈ ಬೆಡಗಿ. ಜಾಲತಾಣಗಳು ಈಕೆಯ ಪೂರ್ವಾಪರದ ಬೆನ್ನು ಹತ್ತಿ ಅವಳು ಯಾರು ಎಂಬುದನ್ನು ಕಂಡುಕೊಂಡಿವೆ. ಆಕೆಯ ಹೆಸರು ನಿವ್ಯಾ ನವೋರಾ. ಪಾಕಿಸ್ತಾನದ ಈ ಯುವತಿ ಶಾರುಖ್ ಖಾನ್‌ರ ಫ್ಯಾನ್. ಬಾಲಿವುಡ್ ಎಂದರೆ ಈಕೆಗೆ ಪ್ರೀತಿ. ಇನ್‌ಸ್ಟಾಗ್ರಾಂನಲ್ಲಿ ಪ್ರೈವೇಟ್ ಅಕೌಂಟ್ ಹೊಂದಿರುವ ಈಕೆಗೆ 5000 ಮಂದಿ ಫಾಲೋವರ್‌ಗಳಿದ್ದಾರೆ.

ಮೊನ್ನೆ ಭಾರತ-ಬಾಂಗ್ಲಾ ಪಂದ್ಯದ ವೇಳೆ ಮೊದಲ ಬಾರಿಗೆ ಈ ನಿವ್ಯಾ ಸ್ಟೇಡಿಯಂನಲ್ಲಿ ಕಣ್ಣಿಗೆ ಬಿದ್ದಿದ್ದಾಳೆ. ಟಿವಿ ಕ್ಯಾಮರಾಗಳು ಈಕೆಯನ್ನು ಫೋಕಸ್ ಮಾಡಿದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿಬಿಟ್ಟಳು. ಊರಿಗೆ ಬಂದವಳು ನೀರಿಗೆ ಬಾರದಿರುತ್ತಾಳೆಯೇ ಎಂದು ನಿನ್ನೆಯ ಭಾರತ-ಪಾಕ್ ಪಂದ್ಯಕ್ಕೂ ಈಕೆ ಬಂದೇ ಬರುತ್ತಾಳೆ ಎಂದು ಕಾದರು. ನಿರೀಕ್ಷೆ ಸುಳ್ಳಾಗಲಿಲ್ಲ. ನಿನ್ನೆಯೂ ಸ್ಟೇಡಿಯಂನಲ್ಲಿ ಕಂಡು ಬಂದ ಈಕೆಯ ಕುರಿತು ಭಾರತೀಯರು ಫಿದಾ ಆಗಿದ್ದಾರೆ. ಪಂದ್ಯದಲ್ಲಿ ಭಾರತಕ್ಕೆ ಪಾಕ್ ಸೋತರೂ ಪಾಕಿ ಬೆಡಗಿ ಭಾರತೀಯರ ಮನ ಗೆದ್ದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...